ಅನಧಿಕೃತ ಆಸ್ಪತ್ರೆಗಳು ಸೀಜ್…!?

945

ಬೆಂಗಳೂರುಗ್ರಾಮಾಂತರ ಜಿಲ್ಲೆ/ ದೊಡ್ಡಬಳ್ಳಾಪುರ: ನಗರದಲ್ಲಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಅವರ ನೇತೃತ್ವದಲ್ಲಿ ದಾಳಿ.
ನಗರದ ಖಾಸ್ ಬಾಗ್, ರೈಲ್ವೇಸ್ಟೇಷನ್, ಶಾಂತಿ ನಗರ, ಕೊಡಿಗೆಹಳ್ಳಿ ಸೇರಿದಂತೆ ಹಲವೆಡೆ ದಾಳಿ. ಡಿಎಚ್ಓ ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಯುಷ್ ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷ್ , ಸ್ಥಳೀಯ ತಾಲೂಕು ಆರೋಗ್ಯ ಅಧಿಕಾರಿ ಡಾ.ಸೆಲ್ವಕುಮಾರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳ ಸಾಥ್. ಬಿಎಂಎಸ್ ಡಾಕ್ಟರ್ ಗಳು ನೊಂದವಣೆ ಇಲ್ಲದೆ, ಪರವಾನಗಿ ನವೀಕರಿಸದೇ ಕ್ಲಿನಿಕ್ ಹೆಸರಿನಲ್ಲಿ ಆಸ್ಪತ್ರೆಗಳನ್ನು ನಡೆಸುತ್ತಿದ್ದ ರೈಲ್ವೇ ಸ್ಟೇಷನ್ ಬೆಸೆಂಟ್ ಪಾರ್ಕ್ ರಸ್ತೆಯಲ್ಲಿನ ರೇಣುಕ ಕ್ಲಿನಿಕ್, ಅನ್ನಪೂರ್ಣ ಹೆಲ್ತ್ ಕೇರ್ ಸೀಜ್ ಮಾಡಲಾಯಿತು.

ನಗರದ ಹೆಸರಾಂತ ಜನತಾ ನರ್ಸಿಂಗ್ ಹೋಂ, , ಕೆಂಪೇಗೌಡ ಆಸ್ಪತ್ರೆ, ಕೊಲಂಬಿಯಾ ಆಸ್ಪತ್ರೆ, ಬಾಶೆಟ್ಟಿಹಳ್ಳಿಯ ರಕ್ಷಿತ ಆಸ್ಪತ್ರೆ ಮತ್ತು ಖಾಸ್ ಭಾಗ್ ನ ವಾತ್ಸಲ್ಯ ಕ್ಲಿನಿಕ್ ಗಳಿಗೆ ಅಧಿಕೃತ ದಾಖಲೆಗಳನ್ನು ಒದಗಿಸುವಂತೆ ಹದಿನೈದು ದಿನಗಳ ಕಾಲಾವಕಾಶ ನೀಡಿ ನೋಟೀಸ್ ಜಾರಿಮಾಡಲಾಗಿದೆ.

ಸ್ಥಳದಲ್ಲೇ ನೋಟೀಸ್ ಜಾರಿಮಾಡಿ ನಿಯಮ ಬಾಹಿರವಾಗಿ ಚಿಕಿತ್ಸೆ ನೀಡುತ್ತಿರುವ ನಕಿಲಿ ವೈದ್ಯರಿಗೆ ಎಚ್ಚರಿಕೆ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ್.ಅನಧಕೃತವಾಗಿ ಚಿಕಿತ್ಸೆ ನೀಡಿ ಜನಸಾಮಾನ್ಯರ ಜೀವದ ಜೊತೆ ಚಲ್ಲಾಟ ವಾಡುವ ಯಾವುದೇ ವ್ಯಕ್ತಿಯಾದರೂ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಅನಧಿಕೃತ ಕ್ಲಿನಿಕ್ ಗಳಮೇಲೆ ದಾಳಿ ನಡೆಯುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ನಗರದಲ್ಲಿನ ಸಾಕಷ್ಟು ಬಿಎಂಎಸ್ ಡಾಕ್ಟರ್ ಗಳು ತಮ್ಮ ಅನಧಿಕೃತ ಕ್ಲಿನಿಕ್ ಗಳಿಗೆ ಬೀಗ ಜಡಿದು ಪರಾರಿ ಯಾಗಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ದಾಳಿ ಒಂದೇ ದಿವಸದ್ದಲ್ಲಾ, ಜಿಲ್ಲೆಯಾದ್ಯಂತ ತಿಂಗಳಿಗೊಮ್ಮೆಯಾದರೂ ಈರೀತಿಯ ದಾಳಿ ನಡೆಸುವುದಾಗಿ ತಿಳಿಸಿದ್ದಾರೆ.