ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

323

ಬಳ್ಳಾರಿ/ ಹೊಸಪೇಟೆ:ನಗರದ 6ನೇ ವಾರ್ಡು ಥಿಯೋಸಾಫಿಕಲ್ ಮಹಿಳಾ ಕಾಲೇಜ್ ಪ್ರದೇಶ ದಲ್ಲಿ 12 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ನಗರಸಭಾಸದಸ್ಯ ಡಿ.ವೇಣು ಗೋಪಾಲ ಗುರುವಾರ ಭೂಮಿ ಪೂಜೆ ನೆವೇರಿ ಸಿದರು.

2017-18 ನೇ ಸಾಲಿನಲ್ಲಿ ಎಸ್‌ಎಫ್‌ಸಿ ಅನುದಾನದ ಆಡಿಯಲ್ಲಿ ಮಂಜೂರಾದ ಸಮುದಾಯಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ವಾರ್ಡು ಸದಸ್ಯ ವೇಣುಗೋಪಾಲ ಕಾಮಗಾರಿಗೆ ಚಾಲನೆ ನೀಡಿದರು.

ಮುಖಂಡರಾದ ಹುಸೇನ್ ಸಾಬ್, ಲಿಂಗಣ್ಣ, ಹನುಮಂತಪ್ಪ, ತಾಯಪ್ಪ, ಮುರಳಿ, ಹನುಮಂತಪ್ಪ, ಹಾಗೂ ಚಿದಾನಂದ ಇತರರಿದ್ದರು.