ಸಿಬ್ಬಂದಿಯ ಯಡವಟ್ಟು..ಸ್ಮಶಾನದಿಂದ ಆಸ್ಪತ್ರೆಗೆ ಶವ ವಾಪಸ್..?

639

*ವಿಮ್ಸ್ ಸಿಬ್ಬಂದಿಗಳಿಂದ ಮಹಾ ಯಡವಟ್ಟು !
*ಸ್ಮಶಾನದಿಂದ ಶವಗಾರಕ್ಕೆ ಮತ್ತೆ ಹೆಣ ತಂದ ವಿಮ್ಸ್ ಸಿಬ್ಬಂದಿ/ ಪೊಲೀಸರು !
*ಅಂತ್ಯಕ್ರೀಯೆ ನಿಲ್ಲಿಸಿದ ಪೊಲೀಸರು/ ವಿಮ್ಸ್ ಸಿಬ್ಬಂದಿಗಳು !

ಬಳ್ಳಾರಿ: ಶವಗಾರದಲ್ಲಿನ ಹೆಣವನ್ನು ಸನ್ಮಾನಕ್ಕೆ ಒಯ್ದು ಅಂತ್ಯಕ್ರೀಯೆ ಮಾಡೋದು ಮಾಮೂಲು, ಆದ್ರೆ ಸಶ್ಮಾನಕ್ಕೆ ಅಂತ್ಯಕ್ರೀಯೆ ಮಾಡಲು ಒಯ್ದು ಶವವೊಂದನ್ನು ವಿಮ್ಸ್ ಸಿಬ್ಬಂದಿ ಮರಳಿ ಶವಗಾರಕ್ಕೆ ತಂದ ಯಡವಟ್ಟು ಒಂದು ಬಳ್ಳಾರಿಯಲ್ಲಿ ನಡೆದಿದೆ, ಹೌದು, ಬಳ್ಳಾರಿಯ ವಿಮ್ಸ್ ಸಿಬ್ಬಂದಿಗಳ ಯಡವಟ್ಟು ಇದೀಗ ಮತ್ತೊಮ್ಮೆ ರುಜುವಾಗಿದೆ, ಯಲ್ಲಮ್ಮ ಎನ್ನುವ ೬೧ ವರ್ಷದ ವೃದ್ದ ಮಹಿಳೆ ಕಳೆದ ೪ರಂದು ಮನೆಯಿಂದ ಹೊರಬಂದಾಗ ಮೋರ್ಛೆ ಹೋಗಿ ರಸ್ತೆಯಲ್ಲಿ ಬಿದ್ದಿದ್ದರು. ವೃದ್ಧ ಮಹಿಳೆ ರಸ್ತೆಯಲ್ಲಿ ಬಿದ್ದಿದನ್ನು ಕಂಡ ಸ್ಥಳೀಯರು ಯಲ್ಲಮ್ಮನನ್ನು ವಿಮ್ಸ್ ಆಸ್ಪತ್ರೆಗೆ ದಾಖಲು‌ ಮಾಡಿದ್ದರು, ಆದ್ರೆ ಯಲ್ಲಮ್ಮ ಕಾಣೆಯಾಗಿ ಎರಡು ದಿನಗಳ ಬಳಿಕ ಯಲ್ಲಮ್ಮನ ಸಂಭದಿಕರು ವಿಮ್ಸ್ ನಲ್ಲಿ ದಾಖಲಾಗಿದ್ದ ವೃದ್ದೆ ತಮ್ಮ ಸಂಭದಿಕರು ಎಂದು ತಿಳಿಸಿ ಚಿಕಿತ್ಸೆ ಕೊಡಿ ಸುತ್ತಿದ್ದರು, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದೆ ಯಲ್ಲಮ್ಮ ಇಂದು ಮುಂಜಾನೆ ಮೃತಪಟ್ಟ ನಂತರ ಶವವನ್ನು ಸಂಭದಿಗಳು ಮಾಡಲಾಗಿತ್ತು, ಯಲ್ಲಮ್ಮನ ಸಂಭದಿಕರು ಸಂಜೆ ಅಂತ್ಯಕ್ರೀಯೆ ನಡೆಸಲು ಬಳ್ಳಾರಿಯ ಆಲದಹಳ್ಳಿಯ ಸನ್ಮಾನ ದಲ್ಲಿ ಅಂತ್ಯಕ್ರೀಯೆ ಮಾಡುವ ವೇಳೆ ಏಕಾಎಕಿ ಎಚ್ಚೆತ್ತುಕೊಂಡ ವಿಮ್ಸ್ ಸಿಬ್ಬಂದಿಗಳು ಹಾಗೂ ಕೌಲಬಜಾರ ಪೊಲೀಸ್ ಠಾಣೆಯ ಹೊರ ಠಾಣೆಯ ಸಿಬ್ಬಂದಿಗಳು ಅಂತ್ಯಕ್ರೀಯೆ ತಡೆದು ಮರಳಿ ಶವಗಾರಕ್ಕೆ ಶವವನ್ನು ತಂದು ಯಡವಟ್ಟು ಮಾಡಿದ್ದಾರೆ.
ಯಲ್ಲಮ್ಮ ವಿಮ್ಸ್ ಆಸ್ಪತ್ರೆಗೆ ದಾಖಲಾದ ವೇಳೆ ವಿಮ್ಸ್ ಸಿಬ್ಬಂದಿ ಪೊಲೀಸರು ಅನಾಮದೇಯ ಮಹಿಳೆ ಎಂದು ದೂರು ದಾಖಲಿಸಿಕೊಂಡಿದ್ದರು, ಹೀಗಾಗೇ ಇಂದು ಮಹಿಳೆ ಸತ್ತ ನಂತರ ಪೊಸ್ಟ್ ಮಾರ್ಟಂ ಮಾಡದೇ ಮೊದಲು ಶವ ಹಸ್ತಾಂತರ ಮಾಡಿ ನಂತರ ಅಂತ್ಯಕ್ರೀಯೆ ವೇಳೆ ಸನ್ಮಾನಕ್ಕೆ ಹೋಗಿ ಶವವನ್ನು ಮರಳಿ ಪೊಸ್ಟಮಾರ್ಟಂಗೆ ತಂದಿರುವುದು ವಿಮ್ಸ್ ಸಿಬ್ಬಂದಿ ಯಡವಟ್ಟುನ್ನು ಎತ್ತಿತೋರಿಸುತ್ತಿದೆ, ಅಲ್ಲದೇ ಸಶ್ಮಾನಕ್ಕೆ ಒಯ್ದ ಶವವನ್ನು ಮರಳಿ ಶವಗಾರಕ್ಕೆ ತಂದಿರುವುದು ಸಂಭದಿಕರ ಆಕ್ರೋಶಕ್ಕೆ ಕಾರಣವಾಗಿದೆ