ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ

333

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಗರದ ಬಸವಭವನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ತಯಾರಿಗಾಗಿ ಬಿ.ಜೆ.ಪಿ.ಯ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು.

ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,ಕರ್ನಾಟಕ ಉಸ್ತುವಾರಿ ಮುರಳೀಧರ ರಾವ್ ಮಾತನಾಡುತ್ತಾ ನಮ್ಮದು ಕಾರ್ಯಕರ್ತರ ಪಕ್ಷ ಕಾಂಗ್ರೆಸ್ ಪಕ್ಷದಂತೆ ಕೌಟುಂಬಿಕ ರಾಜಕೀಯ ಪಕ್ಷವಲ್ಲ ಎಂದರು. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಪಕ್ಷದ ಕಟ್ಟಕಡೆಯ ಕಾರ್ಯಕರ್ತ ಸ್ಥಾನದಿಂದ ಹಂತ ಹಂತವಾಗಿವಾಗಿ ಬೆಳೆದು ಬಂದವರು ಆ ಕಾರಣ ದಿಂದಲೇ ನಮ್ಮಪಕ್ಷದಲ್ಲಿ ಪ್ರತೀ ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯಗಳಿಗೂ ಮನ್ನಣೆ ಇದೆ. ಪಕ್ಷ ಬಲಿಷ್ಟ ವಾಗಬೇಕಿದ್ದರೇ ಪ್ರತೀ ಕಾರ್ಯಕರ್ತರ ಶ್ರಮವನ್ನು ನಾವು ಗುರುತಿಸ ಬೇಕಿದೆ ಎಂದರು. ಕಾಂಗ್ರೆಸ್ ಪಕ್ಷದಂತೆ ನಮ್ಮದು ಹೈಕಮ್ಯಾಂಡ್ ಅವಲಂಭಿತವಲ್ಲ ನಮ್ಮ ಬಿಜೆಪಿ ಪಕ್ಷ ಕಾರ್ಯಕರ್ತರ ಅವಲಂಭಿತ ಎಂದರು.

ಈ ಗಾಗಲೇ ನಮ್ಮ ಪಕ್ಷ ಕಾಂಗ್ರೆಸ್ಸಿಗರಿಗೆ ಮಾದರಿ ಪಕ್ಷವಾಗಿದೆ. ಉದಾಹರಣೆಗೆ ಕಾಂಗ್ರೆಸ್ ಪಕ್ಷದ ಕರ್ನಾಟಕದ ಉಸ್ತುವಾರಿ ಜವಾಬ್ದಾರಿ ಹೊಣೆ ಹೊತ್ತಿರುವ ವೇಣುಗೋಪಾಲ್ ಪ್ರತಿಯೊಂದು ವೇದಿಕೆಯಲ್ಲೂ ನಮ್ಮ ಪಕ್ಷ ಮತ್ತು ನಮ್ಮ ಕಾರ್ಯಕರ್ತರನ್ನು ಅನುಸರಿಸುವಂತೆ ಮತ್ತು ಬೂತ್ ಮಟ್ಟದಲ್ಲಿ ಕೆಲಸಮಾಡುವಂತೆ ಬಿಜೆಪಿ ಪಕ್ಷವನ್ನು ಮಾದರಿಯಾಗಿ ಯಾಗಿ ತೆಗೆದು ಕೊಂಡು ಕೆಲಸ ನಿರ್ವಹಿಸುವಂತೆ ಸಲಹೆ ನೀಡುತ್ತಿರುವುದು ಈ ಗಾಗಲೇ ನಾವು ಅವರನ್ನು ಗೆದ್ದಂತಾಗಿದೆ ಎಂದರು.

ಇನ್ನು ಕೇಂದ್ರಾಡಳಿತ ಮತ್ತು ರಾಜ್ಯಾಡಳಿತದ ಬಗ್ಗೆ ಅವರು ಮಾತನಾಡುತ್ತಾ ಇಡೀ ಭಾರತದೇಶದ ಶೇಕಡ ಎಪ್ಪತ್ತರಷ್ಟು ಭಾಗ ನಮ್ಮ ಬಿಜೇಪಿ ಆಡಳಿತದಿಂದ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ ಆದರೆ ದೌರ್ಭಾಗ್ಯ ಎಂಬಂತೆ ಕರ್ನಾಟಕ ಸೇರಿದಂತೆ ದೇಶದ ಒಂದಿಷ್ಟುಕಡೆ ಭ್ರಷ್ಟ ಕಾಂಗ್ರೆಸ್ಸ್ ಕಪಿಮುಷ್ಟಿಯಲ್ಲಿ ಆಡಳಿತಲ್ಲಿದೆ ಎಂದರು. ಆದರೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ತಾರತಮ್ಯ ಭಾವನೆಯಿಲ್ಲದೆ ಎಲ್ಲ ರಾಜ್ಯಗಳಿಗೆ ನೀಡುವಂತೆ ಕರ್ನಾಟಕ ರಾಜ್ಯಕ್ಕೂ ಎಲ್ಲಾ ಅನುಧಾನಗಳೂ ನೀಡುತ್ತಿದ್ದರೂ ಅದರ ಸದ್ಬಳಕೆ ಮಾಡಿಕೊಳ್ಳಲು ವಿಫಲಾಗುತ್ತಿದ್ದಾರೆ ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಆರೋಪಿಸಿದರು. ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದಷ್ಡು ಸರಿ ಸುಮಾರು ನಾಲ್ಕುಸಾವಿರ ರೈತರ ಸಾವಿಗೆ ನೇರ ಕಾರಣರಾದ ಕಾಂಗ್ರೆಸಿಗರ ಬಗ್ಗೆ ರಾಜ್ಯದ ಜನತೆಗೆ ಈಗಾಗಲೇ ಬೇಸರ ಮೂಡಿದೆ. ಸಾಕಪ್ಪಾ ಇವರ ಆಡಳಿತ ಎಂದು ಶಪಿಸುತ್ತಿರುವ ಶ್ರೀ ಸಾಮಾನ್ಯರ ಶಾಪವೇ ಕಾಂಗ್ರೆಸ್ ಆಡಳಿತಕ್ಕೆ ಇತಿ ಹಾಡಲಿದೆ ಎಂದರು.

ಒಟ್ಟಾರೆ ಮುಂದಿನ ಚುನಾವಣೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ನೂರ ಐವತ್ತಕ್ಕೂ ಹೆಚ್ಚಿನ ಕ್ಷೇತ್ರ ಗಳಲ್ಲಿ ಗೆಲುವು ಸಾದಿಸುವ ನಮ್ಮ ಬಿಜೆಪಿ ಪಕ್ಷದ್ದೇ ಆಡಳಿತ, ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷರು ಕೆಎಂ.ಹನುಮಂತ ರಾಯಪ್ಪ, ಯಲಹಂಕ ಶಾಸಕರಾದ ಎಸ್ಆರ್.ವಿಶ್ವನಾಥ್, ಬಿ.ಜೆ.ಪುಟ್ಟಸ್ವಾಮಿ, ಜಿಲ್ಲಾಧ್ಯಕ್ಷರು ರಾಜಣ್ಣ, ಬೆಂಗಳೂರು.ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ,ಪ್ರಧಾನ ಕಾರ್ಯದರ್ಶಿ ರಾಮಕೃಷ್ಣಪ್ಪ,ಜಿಲ್ಲಾ ಮಾದ್ಯಮ ವಕ್ತಾರ ಅಶ್ವತ್ ನಾರಾಯಣ ಕುಮಾರ್ (ಸ್ವಾಮಿ) ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ನಗರಾಧ್ಯಕ್ಷ ಕೆಹೆಚ್. ರಂಗರಾಜು, ನಗರಸಭಾ ಅಧ್ಯಕ್ಷ ಕೆ.ಬಿ.ಮುದ್ರಪ್ಪ,ಜಿಲ್ಲಾ ಯುವ ಮೋರ್ಚ ಅಧ್ಯಕ್ಷರಾದ ಶಿವಶಂಕರ್, ಜಿಲ್ಲಾ ಪ್ರಧಾನ ಕಾಯ೯ದಶಿರಾದ ಪುಷ್ವ ಶಿವಶಂಕರ್ ಮಹಿಳಾ ಮೋರ್ಚ ಅಧ್ಯಕ್ಷೆ ವತ್ಸಲಾ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.