“ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಸಮಾಲೋಚನೆ”

264

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಬಿಜಿನೆಸ್ ಸ್ಕೂಲ್ ಆಫ್ ಮೇನೇಜ್ ಮೆಂಟ್ ಸ್ಟಡೀಸ್ ಗೀತಂ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್ ಹಮ್ಮಿಕೊಂಡಿದ್ದ “ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಸಮಾಲೋಚನೆ” (ಸಿಇಓ ಕಾನ್ ಕ್ಲೇವ್) ಎಂಬ ಕಾರ್ಯಕ್ರಮವನ್ನು ಮಾಜಿ ಡಿಫೆನ್ಸ್‌ ಮಿನಿಸ್ಟರ್ ಕೃಷ್ಣ ಕುಮಾರ್ ಬಾ,ಆ,ಸೇ.ರವರು ಉದ್ಘಾಟಿಸಿದರು. ಗೀತಂ ವಿಶ್ವವಿದ್ಯಾಲಯದ ಸಹಾಯಕ ಉಪಕುಲಪತಿಗಳಾದ ಪ್ರೊ.ಪಿ.ವಿ. ಶಿವಪುಲ್ಲಯ್ಯ, ಗೀತಂ ಸ್ಕೂಲ್ ಆಫ್ ಟೆಕ್ನಾಲಜಿ ಯ ನಿರ್ದೇಶಕರು ಪ್ರೊ.ಕೆ.ವಿಜಯ ಭಾಸ್ಕರ ರಾಜು,ಬಿಎಸ್ಎಂಎಸ್ ನ ಡೀನ್ ಪ್ರೊ.ಸರಿತ್ ಕುಮಾರ್ ಹಾಗೂ ವಿವಿಧ ದೇಶದ ಸಿಇಓ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗಿ ತಮ್ಮದೇ ಆದಂತಹ ಹೊಸ ಯೋಜನೆಗಳನ್ನು ಯಾವ ರೀತಿ ರೂಪಿಸಿ ಕೊಳ್ಳಬಹುದು ಎಂಬುದನ್ನು ವಿವಿಧ ಐಟಿ ಕಂಪನಿಗಳ ಸಿಇಓ ಗಳು ತಿಳಿಸಿಕೊಟ್ಟರು. ಇದಕ್ಕೂ ಮೊದಲು ಕರ್ನಾಟಕದ ಹೆಸರಾಂತ ಪೊಲೀಸ್ಎಡಿಜಿಪಿ ಅಧಿಕಾರಿ ಸಂಜಯ್‌ ಘಾಯ್, ಐಪಿಎಸ್.ರವರು ಸೈಬರ್ ಸೆಕ್ಯೂರಿಟಿಯ ಬಗ್ಗೆ ವಿದ್ಯಾರ್ಥಿಗಳಿಗೆ ಹೊಸ ಅದ್ಯಯನದ ಬಗ್ಗೆ ತಿಳಿಸಿಕೊಟ್ಟರು.

ಇಸ್ರೇಲ್ ಜೊತೆ ಹೊಸ ಕೋರ್ಸ್ ಸೈಬರ್ ಸೆಕ್ಯುರಿಟಿ ಯನ್ನು ಹೊಸದಾಗಿ ಪ್ರಾರಂಭಿಸುವ ಬಗ್ಗೆ ತಿಳುವಳಿಕೆ ಯ ಒಡಂಬಡಿಕೆಯ (ಎಂಒವಿ) ಗೆ ಸಹಿ ಮಾಡಲಾಯಿತು. ಇಸ್ರೇಲ್ ನ ಸಿಇಓ ಅಮಿತ್ ಈಸಟ್,ಆಸಿಫ್ ಇಕ್ಬಾಲ್ ಅಧ್ಯಕ್ಷ ಐಇಟಿಒ,ಚಕ್ ಮನಮ್ ಕಾನ್ಫಿ ಇಸ್ರೇಲ್ ಮತ್ತು ಭಾರತ ಸಂಪರ್ಕ ಕ್ರೀನ್ ಪಾಲ್,ಇಂಟರ್ ನ್ಯಾಷನಲ್ ಸ್ಮೇಟರ್ ಚೆಕ್ ಸಂಪರ್ಕ ಮುಂತಾದ ಸಿಇಓ ಗಳು ತಮ್ಮದೇ ಆದಂತಹ ವೈಶಿಷ್ಟ್ಯತೆಯ ಐಟಿ ಕಂಪೆನಿಗಳ ಬಗ್ಗೆ ಎಂಬಿಎ ಮತ್ತು ಬಿಬಿಎಂ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಸಿಇಓ ಗಳ ಮುಕ್ತ ಸಮಾಲೋಚನೆಯ ಸಂವಾದದಲ್ಲಿ ವಿವಿಧ ಕಂಪನಿಯ ಸಿಇಓಗಳ ಜೊತೆ ಬಿಎಸ್ಎಂಎಸ್ ನ ಡೀನ್ ಪ್ರೊ,ಸರಿತ್ ಕುಮಾರ್ ಉತ್ತಮ ಪ್ರಶ್ನೆಗಳನ್ನು ಕೇಳುವುದರ ಮೂಲಕ ವಿದ್ಯಾರ್ಥಿಗಳು ಮತ್ತು ಸಿಇಓ ಗಳ ಗಮನಸೆಳೆದರು.

ಕಾರ್ಯಕ್ರಮದ ಕೊನೆಯಲ್ಲಿ ಗೀತಂ ವಿಶ್ವವಿದ್ಯಾಲಯದ ಸಹಾಯಕ ಉಪ ಕುಲಪತಿಗಳು ಪ್ರೊಫೆಸರ್. ಪಿವಿ.ಶಿವಪುಲ್ಲಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಇಓ ಗಳಿಗೆ ಭಾರತೀಯ ಸಂಪ್ರದಾಯದಂತೆ ಶಾಲುಹೊದಿಸಿ ಸನ್ಮಾನಿಸಿ, ಗೌರವಿಸಿದರು.