ಅಭಿನಂದನಾ ಸಮಾರಂಭ…

292

ಮಂಡ್ಯ/ಮಳವಳ್ಳಿ: ಶ್ರೀ ಅದಿನಾಡು ಚಿಕ್ಕಮ್ಮತಾಯಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಾ.ಬಿ.ಎಸ್ ಶಿವಣ್ಣನವರಿಗೆ ಅಭಿನಂದನಾ ಸಮಾರಂಭ ಮಳವಳ್ಳಿ ತಾಲ್ಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆಯಿತು. ಸಮಾರಂಭವನ್ನು ಸಾಹಿತಿ ಪತ್ರಕರ್ತ ಹೊನ್ನಾಚಾರ್ ರವರು ಉದ್ಘಾಟಿಸಿ ಮಾತನಾಡಿ, ಬಿ.ಎಸ್ ಶಿವಣ್ಣರವರು ಡಾಕ್ಟರೇಟ್ ನೀಡಿರುವವುದು ಸಂತಸ. ಕಳೆದ ಎರಡು ವರ್ಷಗಳ ಹಿಂದೆಯೇ ಹೊಗೆಮುಕ್ತ ಗ್ರಾಮ ಮಾಡಲು ಹೊರಟಿದ್ದರು. ಜೊತೆಗೆ ಸ್ವಚ್ಚ ಗ್ರಾಮಮಾಡಲು ಮಾದರಿ ಉಚಿತವಾಗಿ ಶೌಚಾಲಯ ನಿರ್ಮಿಸಿಕೊಟ್ಟ ಮಹಾನ್ ವ್ಯಕ್ತಿ ಎಂದರು ಇವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಜನಪ್ರಿಯ ಸಮಾಜವಾದಿ ಚಿಂತಕರಾದ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಸ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನಗೆ ಪದವಿ ಬೇಡ ನಾನೇ ಅಧಿಕಾರ ನೀಡುವಾಗ ನನಗೇಕೆ ಅಧಿಕಾರ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕು ಮತ್ತಷ್ಟು ಅಭಿವೃದ್ಧಿ ಪಡಿಸೋಣ ಎಂದರು.ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೃಷ್ಣ, ವಹಿಸಿದ್ದರು. ಕುಂದೂರು ರಷಸಿದ್ದೇಶ್ವರ ಮಠದ ನಂಜುಂಡಸ್ವಾಮಿ, ಗವಿಮಠದ ಷಡಕ್ಷರಿಸ್ವಾಮಿ, ದಿವ್ಯ ಸಾನಿದ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಶ್ವಿನ್ ಚನ್ನೇಗೌಡ, ಅಭಿಷೇಕ್. ದೇವಿ, ಮಾಗನೂರುಶಿವಕುಮಾರ್, ಲಿಂಗಣ್ಣ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಯ್ಯ,ಸೋಮಣ್ಣ. ಕೆಂಪರಾಜು, ಸೇರಿದಂತೆ ಮತ್ತಿತ್ತರರು ಇದ್ದರು.