ಉಚಿತ ಆರೋಗ್ಯ ಶಿಬಿರಕ್ಕೆ ಶಾಸಕ ಚಾಲನೆ..

186

ಬಳ್ಳಾರಿ/ಹೊಸಪೇಟೆ:88ಮುದ್ಲಾಪುರದಲ್ಲಿ ಭಾನುವಾರ ಬಿಜೆಪಿ ನಗರ ಘಟಕ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರವನ್ನು ಶಾಸಕ ಆನಂದ್ ಸಿಂಗ್ ಉದ್ಘಾಟಿಸಿದರು.

ಬಳಿಕ ಆನಂದ್ ಸಿಂಗ್ ಮಾತನಾಡಿ, ಬಿಜೆಪಿಯ ಎಲ್ಲಾ ಘಟಕಗಳು ಸಕ್ರಿಯವಾಗಿ ಉತ್ತಮ ಕೆಲಸ ಮಾಡುತ್ತಿವೆ ಎಂದರು. ಎಲ್ಲಾ ಘಟಕಗಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದು, ಅವುಗಳ ಕಾರ್ಯ ಶ್ಲಾಘನೆಯವಾಗಿದೆ ಎಂದರು. ಜನರ ಆರೋಗ್ಯ ತಪಾಸಣೆಗೆ ಮುಂದಾಗಿರುವುದು ಬಿಜೆಪಿ ನಗರ ಘಟಕ ಉತ್ತಮ ಕೆಲಸವಾಗಿದೆ ಎಂದು ಶ್ಲಾಘನೆ ವ್ಯಕ್ತ ಪಡಿಸಿದರು. 88ಮುದ್ಲಾಪುರಕ್ಕೆ ಮುಂಚೆ ಹೊಸಪೇಟೆಗೆ ಕುಡಿಯುವ ನೀರು ಪೂರೈಸುವ ಕೇಂದ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ  ಬೇಟಿ ನೀಡಿ ಪರಿಶೀಲಿಸಿದರು. ನಗರಸಭೆ ಆಧಿಕಾರಿಗಳು ಉಪಸ್ಥಿತರಿದ್ದರು.  ಮಾಜಿ ಶಾಸಕ ಎಸ್. ರತನ್ ಸಿಂಗ್, ಬಿಜೆಪಿಮುಖಂಡರಾದ ಸಂದೀಪ್ ಸಿಂಗ್, ಧಮೇಂದ್ರ ಸಿಂಗ್, ನಗರ ಘಟಕದ ಅಧ್ಯಕ್ಷ ಕಾಳಘಟ್ಟ ಪ್ರಕಾಶ ಗೌಡ ಮತ್ತಿತರರು ಹಾಜರಿದ್ದರು.