ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

550

ಚಿಕ್ಕಬಳ್ಳಾಪುರ/ ಚಿಂತಾಮಣಿ:- ಕೆರೆ ಅಂಗಳದಲ್ಲಿ ಮರ ಕಡಿಯಲು ಹೋಗಿ ಮರದ ಕೋಂಬೆ ತಲೆಯ ಮೇಲೆ ಬಿದ್ದು ವ್ಯಕ್ತಿಯೋಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬಟ್ಲಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ತಂಬಾಳಪಲ್ಲಿ ಕೆರೆ ಪ್ರದೇಶದಿಂದ ವರದಿಯಾಗಿದೆ
ಸಾವನಪ್ಪಿರುವ ವ್ಯಕ್ತಿ ಈರಪ್ಪ(೪೦) ಎಂದು ತಿಳಿದುಬಂದಿದ್ದು ಭಾನುವಾರ ರಾತ್ರಿ ಸುಮಾರು ೧೧ ರ ಸಮಯದಲ್ಲಿ ಈರಪ್ಪ ಮತ್ತು ಇತರೆ ೫ ಮಂದಿ ಕೆರೆ ಅಂಗಳದಲ್ಲಿ ಬೆಳೆದು ನಿಂತ್ತಿದ್ದ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುವ ಸಲುವಾಗಿ ತೆರೆಳಿದ್ದ ಸಮಯದಲ್ಲಿ ಮರ ಕಡಿಯುವಾಗ ಮರದ ಕೆಳೆಗೆ ನಿಂತ್ತಿದ್ದ ಈರಪ್ಪ ಮೇಲೆ ಕೋಂಬೆ ಬಿದ್ದು ಸಾವನಪ್ಪಿದ್ದು ಸ್ಥಳಕ್ಕೆ ಬಟ್ಲಹಳ್ಳಿ ಪೋಲೀಸರು ಬೇಟಿ ನೀಡಿ ಪ್ರಕರಣ ಧಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ