ದಸರಾ-ಮೊಹರಂ ,ಶಾಂತಿ ಸೌಹಾರ್ಧತೆ ಯಿಂದ ಆಚರಿಸಿ

246

ಬಳ್ಳಾರಿ /ಹೊಸಪೇಟೆ:ತಾಲೂಕಿನ ನಾಗರೀಕರು ದಸರಾ ಹಾಗೂ ಮೊಹರಂ ಹಬ್ಬವನ್ನು ಶಾಂತಿ-ಸೌಹಾರ್ಧತೆಯಿಂದ ಆಚರಿಸುವಂತೆ ತಹಶೀಲ್ದಾರ್ ಹೆಚ್.ವಿಶ್ವನಾಥ ಕರೆ ನೀಡಿದರು.

ಸ್ಥಳೀಯ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿಂದು ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ದಸರಾ ಹಾಗೂ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಸರಾ ಹಾಗೂ ಮೊಹರಂ ಹಬ್ಬದ ಏಕಕಾಲದಲ್ಲಿ ಬಂದಿರುವುದರಿಂದ ಎರಡು ಹಬ್ಬವನ್ನು ನಾಗರೀಕರು ಶಾಂತಿ-ಸೌಹಾರ್ಧತೆಯಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸಿದೆ, ಹಾಗೂ ಬೇರೆ ಕೋಮಿನ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಮೂಲಕ ಕೋಮುಸೌಹಾರ್ಧತೆಯನ್ನು ಮೆರೆಯಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಹಾಯಕ ಆಯುಕ್ತ ಪ್ರಶಾಂತ ಕುಮಾರ್ ಮಿಶ್ರಾ ವಹಿಸಿದ್ದರು. ಸಭೆಯಲ್ಲಿ ಡಿವೈಎಸ್ಪಿ ಕೆ.ಶಿವಾರೆಡ್ಡಿ, ಪಿಐ ಗಳಾದ ಲಿಂಗನಗೌಡ ನೆಗಳೂರು, ಪಂಪನಗೌಡ, ರಾಧಾಕೃಷ್ಣ, ಆಂಜನೇಯ, ಮುಖಂಡರಾದ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ, ಜಿ.ಕೆ.ಹನುಮಂತಪ್ಪ, ಡಿ.ಚೆನ್ನಪ್ಪ, ಜಿ.ಖಾಜಾ ಹುಸೇನ್ ನಿಯಾಜಿ, ಗುಜ್ಜಲ ನಾಗರಾಜ, ಪಿ.ವಿ.ವೆಂಕಟೇಶ್, ಗುಂಡಿ ರಾಘವೇಂದ್ರ, ಬಿ.ತಾಯಪ್ಪ ನಾಯಕ, ಆರ್.ಭಾಸ್ಕರ್ ರೆಡ್ಡಿ, ನಿಂಬಗಲ್ ರಾಮಕೃಷ್ಣ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.