ಪಂ.ದೀನದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ

339

ಬಿಜೆಪಿ ಪಕ್ಷದ ವತಿಯಿಂದ
ಪಂ.ದೀನದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆ ಅಂಗವಾಗಿ ರುದ್ರಭೂಮಿಯಲ್ಲಿ ಸಸಿಗಳನ್ನು ನೆಡುವುದುರ ಮೂಲಕ ಆಚರಣೆ

ಬಳ್ಳಾರಿ /ಹೊಸಪೇಟೆ.
ಸ್ಥಳೀಯ ಬಿಜೆಪಿ ಮಂಡಲ ವತಿಯಿಂದ ನಗರದಲ್ಲಿಂದು ಪಂ.ದೀನದಯಾಳ್ ಉಪಾಧ್ಯಾಯ ರ 101ನೇ ಜನ್ಮ ದಿನವನ್ನು ಆಚರಿಸಲಾಯಿತು.

ಪಂ.ದಿನದಯಾಳ್ ಉಪಾಧ್ಯಾಯ ರ ಜನ್ಮ ದಿನಾಚರಣೆ ಅಂಗವಾಗಿ ನಗರದ 6ನೇ ವಾರ್ಡಿನ ರುದ್ರಭೂಮಿಯಲ್ಲಿ ಸಸಿಗಳನ್ನು ನೆಡಲಾಯಿತು. ಅಲ್ಲದೆ ನಗರದ ಅಮರಾವತಿ ಯಲ್ಲಿನ ಸಾಧ್ಯ ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು.

6ನೇ ವಾರ್ಡಿನ ರುದ್ರಭೂಮಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಶಾಸಕ ಆನಂದ್ ಸಿಂಗ್ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅಮರಾವತಿಯ ಸಾಧ್ಯ ವಸತಿ ವಿಶೇಷ ಮಕ್ಕಳ ಶಾಲೆಗೆ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂದೀಪ್ ಸಿಂಗ್, ನಗರಸಭೆ ಸದಸ್ಯ ಡಿ.ವೇಣು ಗೋಪಾಲ, ಮುಖಂಡರಾದ ಧರ್ಮೇಂದ್ರ ಸಿಂಗ್, ಬಸವರಾಜ ನಾಲತ್ವಾಡ್, ಜೀವರತ್ನಂ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.