ಕೆರೆ ತುಂಬಿಸುವ ಯೋಜನೆಗೆ ಶಾಸಕ ರಿಂದ ಚಾಲನೆ

337

ಬಳ್ಳಾರಿ /ಹೊಸಪೇಟೆ:ತಾಲೂಕಿನ ಚಿನ್ನಾಪುರ ಕೆರೆ ತುಂಬಿಸುವ ಯೋಜನೆಗೆ ಶಾಸಕ ಅನಂದ್ ಸಿಂಗ್ ಶುಕ್ರವಾರ ಚಾಲನೆ ನೀಡಿದರು,
ಗ್ರಾಮ ವಾಸ್ತವ್ಯದ 19ನೇ ದಿನ ತಾಲೂಕಿನ ಹೊಸಚಿನ್ನಾಪುರ ಗ್ರಾಮದಲ್ಲಿ 600 ಎಕೆರೆಗೆ ನೀರುಣುಸಿವ ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ನಂತರ ಮಾತನಾಡಿದ ಅವರು, ರೈತರ ಬದುಕಿಗೆ ಅಸರೆಯಾಗುವ ಈ ಯೋಜನೆ ಯನ್ನು ಫಲಪ್ರದ ಮಾಡಿಕೊಳ್ಳಬೇಕು. ಅಲ್ಲದೆ ನಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಗಳಿಗೆ ವರದಾನವಾಗುವ ಈ ಯೋಜನೆಗೆ ಎಚ್.ಎಲ್.ಸಿ. ಕಾಲುವೆಯಿಂದ ನೀರು ಹರಿಸಲಾಗುವುದು ಎಂದರು.
ಗ್ರಾಮ ವಾಸ್ತವ್ಯದ ಜೊತೆಗೆ ಗ್ರಾಮದ ಮೂಲ ಸಮಸ್ಯೆಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಎಲ್ಲಾ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ ಅವರು, ಮತ್ತೆ ಗ್ರಾಮಕ್ಕೆ ಭೇಟಿ ನೀಡುವುದಾಗಿ , ಕೃಷಿ ಮೇಳವನ್ನು ರೈತರಿಗಾಗಿ ಆಯೋಜಿಸುವುದಾಗಿ ಭರವಸೆ ನೀಡಿದರು.