ಚಿರತೆ ದಾಳಿಗೆ ಕುದುರೆ ಬಲಿ..

373

ಬಳ್ಳಾರಿ /ಹೊಸಪೇಟೆ:ಚಿರತೆ ಯೊಂದು ಕುದುರೆ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಹಂಪಿಯ ರಾಜಮಾನ್ಯರ ವಸತಿ ಗೃಹದ ಬಳಿಯ ಗುಡ್ಡಗಾಡುಪ್ರದೇಶದಲ್ಲಿಸೋಮವಾರ ನಡೆದಿದೆ.

ಹಂಪಿ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಕುರಿಗಾಹಿಗಳಿಗೆ ಸೇರಿದ ಕುದರೆ ಮರಿಯನ್ನು ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದು, ಕುತ್ತಿಗೆ ಹಾಗೂ ಕೆಳ ಭಾಗವನ್ನು ಕಿತ್ತು ತಿಂದಿದೆ. ಚಿರತೆ ಬೆಳಗಿನ ಜಾವದಲ್ಲಿ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ತಿಂಗಳು ಚಿರತೆ ದಾಳಿ ನಡೆಸಿ ಕುದರೆಯನ್ನು ಕೊಂದು ಹಂಪಿಯ ಪಾರ್ಕಿಂಗ್ ಪ್ರದೇಶದಲ್ಲಿ ಬೀಸಾಡಿ ಹೋಗಿತ್ತು. ಈ ಹಿಂದೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ಗುಂಡಾ ಗ್ರಾಮದ ಹೊರವಲದಲ್ಲಿ ಚಿರತೆ, ಎರಡು ಕುದರೆಗಳ ಮೇಲೆ ದಾಳಿ ನಡೆಸಿದನ್ನು ಇಲ್ಲಿ ಸ್ಮರಿಸಬಹುದು. ಚಿರತೆಗಳು, ದನ-ಕುರಿ ಸೇರಿದಂತೆ ಕುದರೆಗಳ ಮೇಲೆ ಪದೇ, ಪದೇ ದಾಳಿ ನಡೆಸುತ್ತಿರುವುದು ಗ್ರಾಮಸ್ಥರ ಹಾಗೂ ಕುರಿಗಾಹಿಗಳ ಆತಂಕಕ್ಕೆ ಕಾರಣವಾಗಿದೆ.