ಪುಣಜನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದಿಂದ ಹಾಕಲಾಗಿದ್ದ

382

ಚಾಮರಾಜನಗರ:
ತಾಲೂಕಿನ ಪುಣಜನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರದಿಂದ ಹಾಕಲಾಗಿದ್ದ ಕೊಳವೆ ಬಾವಿ ತನ್ನದೆಂದು ಹೇಳಿಕೊಂಡು ಅದೇ ಗ್ರಾಮದ ರಂಗೂನಾಯಕ್ ಮೋಟಾರು, ವೈರು ಹಾಗೂ ಪೈಪುಗಳನ್ನು ಬಾವಿಗೆ ಬಿಡಲು ಬಂದವರಿಗೆ ತಡೆ ನೀಡಿದ್ದಾನೆಂದುಕೊಂಡು ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ತು.
ಗ್ರಾಮದ ಕುಡಿಯುವ ನೀರಿನ ತೊಂದರೆ ಇದ್ದ ಹಿನ್ನೆಲೆಯಲ್ಲಿ ಕೊಳವೆ ಬಾವಿಯನ್ನು ಈಗಷ್ಟೇ ಕೊರೆಯಿಸಲಾಗಿತ್ತು. ನೀರು ಬರುವವರೆಗೆ ಇದ್ದ ರಂಗೂನಾಯಕ್ ನೀರು ಬಂದ. ತಕ್ಷಣ ಈ ಕೊಳವೆ ಬಾವಿಯ ಜಾಗ ನನ್ದೆಂದು ತಕರಾರು ಎತ್ತಿದ್ದಾನೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಈ ಒಂದು ತೊಂದರೆಗೆ ಕಾರಣ ಎಂದು ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.