ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ

361

ಚಾಮರಾಜನಗರ/ಕೊಳ್ಳೇಗಾಲ: ಅರಣ್ಯ ನಮ್ಮ ನೈಸರ್ಗಿಕ ಸಂಪತ್ತು. ಅದನ್ನು ಉಳಿಸಿಕೊಂಡು ಹೋಗಲು ಅರಣ್ಯ ಇಲಾಖೆಯೊಂದಿಗೆ ಪ್ರತಿಯೊಬ್ಬರ  ಕೈ ಜೋಡಿಸಬೇಕಿದೆ ಎಂದು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವರು ಬಿ. ರಮಾನಾಥ್ ರೈ ತಿಳಿಸಿದರು.

ಪಟ್ಟಣದ ಶ್ರೀ ಮಹಾದೇಶ್ವರ ಕಾಲೇಜು ಮೈದಾನದಲ್ಲಿ  ಕಾವೇರಿ ವನ್ಯಜೀವಿ ವಿಭಾಗ ಮತ್ತು ಮಲೈ ಮಹಾದೇಶ್ವರ ವನ್ಯಜೀವಿ ವಿಭಾಗದ ಕೊಳ್ಳೇಗಾಲ ಇವರ ಸಹಯೋಗದಲ್ಲಿ “63ನೇ ವನ್ಯಜೀವಿ ಸಪ್ತಾಹ 2017 ” ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಣ್ಯಉಳಿಸಿಕೊಂಡು ವನ್ಯಜೀವಿಗಳನ್ನು ಕಾಪಾಡಿಕೊಂಡು ಹೋಗುವುದರಿಂದ ನಮ್ಮ ಭವಿಷ್ಯವೂ ಚೆನ್ನಾಗಿರಲಿದೆ. ಪರಿಸರದ ಉಳಿವಿನಿಂದ ಮಾತ್ರ ಮನುಕುಲದ ಉಳಿವು ಸಾಧ್ಯ. ನಮ್ಮ ಸ್ವಾರ್ಥಕ್ಕಾದರೂ ನಾವು ಪರಿಸರ ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ ಎಂದರು.

ಅರಣ್ಯ ಮತ್ತು  ವನ್ಯ ಜೀವಿಗಳ ರಕ್ಷ ಣೆ, ವಿನಾಶ ದಂಚಿನಲ್ಲಿರುವ ವನ್ಯಜೀವಿ ಹಾಗೂ ಪರಿಸರ ವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಸರ್ಕಾರದ ಬಿಗಿ ಕ್ರಮಗಳಿಂದಾಗಿ ಹುಲಿ, ಆನೆ ಮತ್ತಿತರ ವನ್ಯಜೀವಿಗಳ ಸಂತತಿ ಹೆಚ್ಚಳ ಗೊಂಡಿದೆ. ಒಂದು ಕಾಲದಲ್ಲಿ ಇವೆಲ್ಲವೂ ಅವನತಿಯಾಗಿಯೇ ಬಿಟ್ಟಿತು ಎನ್ನುವ ಆತಂಕ ನಮ್ಮಲ್ಲಿ ಮನೆ ಮಾಡಿತ್ತು. ಆದರೆ, ಉತ್ತಮ ಸಂರಕ್ಷಣಾ ಕ್ರಮಗಳಿಂದಾಗಿ ಈಗ ಅವುಗಳ ಸಂತತಿ ಅಭಿವೃದ್ಧಿಯಾಗಿದೆ. ಆದರೆ, ಈಗ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ ಗೊಂಡಿದೆ. ಇದಕ್ಕೆ ತುರ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ನಾಡಿನ ಅರಣ್ಯ ರಕ್ಷಣೆ ಮಾಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಮಕ್ಕಳಿಗೆ ಪ್ರೌಢಶಾಲಾಯಿಂದ ಉನ್ನತ ಶಿಕ್ಷಣದವರೆಗೂ ಪ್ರಸ್ತುತ ಸಾಲಿನಿಂದ ವಿದ್ಯಾರ್ಥಿ ವೇತನ ನೀಡಲಾಗುವುದು.ಇದರಿಂದ ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು  ಸ್ಪಷ್ಟಪಡಿಸಿದರು.

ಅರಣ್ಯ ಇಲಾಖೆ ಇದುವರೆಗೆ ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ  ವಿದ್ಯಾರ್ಥಿ ಗಳಿಗೆ ಪರಿಸರದ  ವಿವಿಧ ಕಾರ್ಯ ಕ್ರಮಗಳನ್ನು ಏರ್ಪಡಿಲಾಗಿದ್ದು,1ನೇ ತರಗತಿ ಯಿಂದ ಪದವಿ ಕಾಲೇಜು ಮಟ್ಟದ ವಿದ್ಯಾರ್ಥಿ ಗಳಿಗೆ ಹಮ್ಮಿ ಕೊಂಡಿದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ಮಾತನಾಡಿ ಭೂ ತಾಪಮಾನ ಹಾಗೂ ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತು ಅತಿಮುಖ್ಯ. ಪರಿಸರ ಮತ್ತು  ವನ್ಯಜೀವಿ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರೆ ಅವರಲ್ಲಿ ಪರಿಣಾಮಕಾರಿ ಬದಲಾವಣೆ ನಿರೀಕ್ಷಿಸಬಹುದು.

ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಮಹತ್ವಾಕಾಂಕ್ಷೆಯೊಂದಿಗೆ ಅರಣ್ಯ ಇಲಾಖೆ ಹಲವು  ಯೋಜನೆ ಜಾರಿಗೊಳಿಸುತ್ತಿದ್ದು ಮಕ್ಕಳಿಗೆ ಅರಣ್ಯ, ವನ್ಯಜೀವಿ ದರ್ಶನ ಭಾಗ್ಯ ದೊರಕಿದೆ. ಮಾನವನ ಸ್ವಾರ್ಥಕ್ಕಾಗಿ ಅರಣ್ಯ ನಾಶವಾಗುತ್ತಿರುವುದನ್ನು ತಪ್ಪಿಸಲು ಮತ್ತು ಮಕ್ಕಳನ್ನು ಭವಿಷ್ಯದಲ್ಲಿ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸಲು ಅರಣ್ಯ ಇಲಾಖೆ ‘ಚಿಣ್ಣರ ವನ ದರ್ಶನ’ ಎಂಬ ವಿನೂತನ ಯೋಜನೆ ಜಾರಿಗೆ ತಂದಿದೆ.

ಅರಣ್ಯ, ವನ್ಯಜೀವಿ ಸಂಕುಲ ಸಂರಕ್ಷಣೆ, ಮಾಲಿನ್ಯ ಮುಕ್ತ ಪರಿಸರ, ಭವಿಷ್ಯಕ್ಕೆ ಅರಣ್ಯಗಳ ಉಳಿವು ಅತ್ಯವಶ್ಯಕ ಎಂಬ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸಬೇಕು ಎಂದರು.

ಶಾಸಕ ಎಸ್.ಜಯಣ್ಣ ರವರು ಮಾತನಾಡಿ, ಕಾಡು ಮತ್ತು ವನ್ಯ ಜೀವಿಗಳು ದಿನೇ ದಿನೆ ಕ್ಷೀಣಿಸುತ್ತಿವೆ. ಪ್ರತಿಯೊಬ್ಬರೂ ಎಚ್ಚರ ವಹಿಸಿ ಸ್ವಯಂ ಪ್ರೇರಣೆಯಿಂದ ರಕ್ಷಣೆಗೆ ಮುಂದಾಗಬೇಕು.

ಪ್ರತಿಯೊಬ್ಬರೂ ಪ್ರಕತಿಯ ಕೂಸು. ಅಭಿವದ್ಧಿಯ ನೆಪದಲ್ಲಿ ಪ್ರಕತಿ ಮಾತೆಯಿಂದ ದಿನೇ ದಿನೇ ದೂರ ಹೋಗುತ್ತಿದ್ದೇವೆ. ಮೊದಲು ಮನುಷ್ಯ ರಾಗಿ ಆಲೋಚನೆ ಮಾಡಿ ಕಾಡು, ಪ್ರಾಣಿ, ಪಕ್ಷಿ, ಸಂಕುಲಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ವನ್ಯ ಸಂಪತ್ತನ್ನು ಸಂರಕ್ಷಿಸದಿದ್ದರೆ ಪರಿಸರದಲ್ಲಿ ಅಸಮತೋಲನ ಉಂಟಾ ಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾದನೆ ಮಾಡುವ ನಿಟ್ಟಿನಲ್ಲಿ ಔದ್ಯೋಗೀ ಕರಣಕ್ಕೆ ಹೆಚ್ಚು ಗಮನಹರಿಸಲಾಗತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹನೂರು ಶಾಸಕ  ಆರ್‌. ನರೇಂದ್ರ ರವರು ಮಾತನಾಡಿ,ಕಾಡಂಚಿನ ಗ್ರಾಮಗಳಲ್ಲಿ ಬದುಕುತ್ತಿರುವ ನಮ್ಮ ರೈತಾಪಿ ಮಂದಿ ತಾಳ್ಮೆಯುಳ್ಳ ವರು. ಕೃಷಿ ಮಾಡುವ ವಿಚಾರದಲ್ಲಿ ಉಳಿದ ರೈತರಿಗಿಂತ ದುಪ್ಪಟ್ಟು ಪ್ರಮಾಣದ ಸಂಕಷ್ಟವನ್ನು ಈ ರೈತರು ಎದುರಿಸುತ್ತಿದ್ದಾರೆ. ಆದರೂ, ಸಹನೆಯಿಂದ ಕೃಷಿ ಮಾಡಿ ಅರಣ್ಯ ಮತ್ತು ವನ್ಯಜೀವಿಗಳ ಜತೆಗೆ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ.

ದನಕರುಗಳನ್ನು ಕಾಡಿಗೆ ಮೈಯಲು ಅರಣ್ಯ ಇಲಾಖೆ  ಅನುಮತಿ ನೀಡಬೇಕು ಇದರಿಂದ ಕಾಡಿಗೆ ಲಾಭ ಹೆಚ್ಚು

ಅರಣ್ಯ ಇಲಾಖೆ ಕಾಡಂಚಿನ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಾಡಂಚಿನ ಗ್ರಾಮ ಗಳಲ್ಲಿರುವ ಸಮಸ್ಯೆಗಳನ್ನು ಪಟ್ಟಿಮಾಡಿ ಆದ್ಯತೆ ಮೇರೆಗೆ ಪರಿಹರಿಸಬೇಕು ಎಂದು ನರೇಂದ್ರ ರವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಸಕ್ಕರೆ ಮತ್ತು ಸಣ್ಣ ಕೈಗಾರಿಕ ಸಚಿವರು ಮೋಹನಕುಮಾರಿ ಉರುಪ್ ಗೀತಾ ಜಿ.ಪಂ.ಚಾ ನಗರ ಉಪಾಧ್ಯಕ್ಷರು ಬಸವ ರಾಜು,  ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಜಯಂತಿ, ಶಿವಮ್ಮ,ಮರಗದಮಣಿ, ನಗರಸಭೆ ಅಧ್ಯಕ್ಷ ಶಾಂತರಾಜು ಉಪಧ್ಯಕ್ಷರಾದ ನಂಜುಂಡ, ತಾ.ಪಂ.ಉಪಾಧ್ಯಕ್ಷೆ ಲತಾರಾಜಣ್ಣ, ತಹಶೀಲ್ದಾರ್ ಕಾಮ್ಮಾಕ್ಷಮ್ಮ, ತೊಟೇಶ್, ಅಕ್ಮಲ್ ಪಾಷ, ಹರ್ಷ ,ರಮೇಶ್, ಅಮಹ್ಮದ್ ಅಜಿಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್, ಡಾ.ಮಾಲತಿ ಪ್ರಿಯ, ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳು ಹಾಜರಿದ್ದರು.