ಬೀದಿ ನಾಯಿ,ಬಿಡಾಡಿ ದನಗಳ ಕಾಟದಿಂದಾ ಕಾಪಾಡ್ರಪ್ಪೋ….

244

ಬೆಂಗಳೂರು/ಮಹದೇವಪುರ:- ಬಿಬಿಎಂಪಿಯ ಅಧಿಕಾರಿಗಳ ನಿರ್ಲಕ್ಷಕ್ಕೆ ನಗರದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ತೀವ್ರತೊಂದರೆ ಅನುಭವಿಸುವಂತಾಗಿದೆ, ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟು ಸಂಚರಿಸುವಂತಾಗಿದೆ. ಅದು ಹೇಗಂತಿರಾ ಈ ಸ್ಟೋರಿ ನೋಡಿ…..

ನಗರದಲ್ಲಿ ಸಂಚಾರ ದಟ್ಟಣೆ ಒಂದು ಕಡೆ ಆದರೆ ಬಿಡಾಡಿ ಹಸುಗಳು ಮತ್ತು ಬೀದಿ ನಾಯಿಗಳ ಕಾಟ ಇನ್ನೊಂದೆಡೆ, ಕಾಡು ಮೃಗಗಳಂತೆ ತಂಡೋಪ ತಂಡಗಳಾಗಿ ಕಾಣುತ್ತಿರುವ ಬೀದಿ ನಾಯಿಗಳು, ರಸ್ತೆಯಲ್ಲಿ ಸಂಚಾರಕ್ಕೂ ಅವಕಾಶ ಇಲ್ಲದಂತೆ ಗುಂಪು ಗುಂಪಾಗಿ ಹೋಗುತ್ತಿರುವ ಬಿಡಾಡಿ ಹಸುಗಳು ಇದೆಲ್ಲ ಕೆಆರ್ ಪುರ ಮತ್ತು ಮಹದೇವಪುರ ಕ್ಷೇತ್ರಗಳಲ್ಲಿ ಕಂಡು ಬಂದ ದೃಶ್ಯಗಳು, ಕೆಆರ್ ಪುರದ ಐಟಿಐ ಕಾಲೋನಿ ಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ವಾಯುವಿಹಾರಕ್ಕೆ ತೆರಳುತ್ತಾರೆ, ಇಲ್ಲಿ ನೂರಾರು ನಾಯಿಗಳು ಮತ್ತು ಬಿಡಾಡಿ ಹಸು ಗಳಿಂದಾಗಿ ತೀವ್ರ ತೊಂದರೆ ಅನುಭವಿಸು ವಂತಾಗಿದೆ.

ಬೈಟ್; ರವಿ ಚಂದ್ರ ದ್ವಿಚಕ್ರವಾಹನ ಸವಾರ.

ಇನ್ನು ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯಾ ಮತ್ತು ಹೂಡಿ ವಾಡರ್್ನ ಕೆಲ ಪ್ರದೇಶ ಗಳಲ್ಲೂ ಇದೇ ರೀತಿಯ ಸಮಸ್ಯೆ ತಲೆ ದೋರಿದೆ, ಈ ಬೀದಿ ನಾಯಿಗಳು ಮನೆಯಿಂದ ಸಣ್ಣ ಮಕ್ಕಳು ಬಂದರೆ ಸಾಕು ಅವರ ಮೆಲೆ ಬೀಳುತ್ತೆ, ಕಚ್ಚಿ ಗಾಯಗೊಳಿಸಿರುವ ಉದಾಹರಣೆಗಳೂ ಸಹ ಇವೆ, ಹಾಗಾಗಿ ಕೂಡಲೆ ಸಂಭಂದ ಪಟ್ಟಚರು ಇತ್ತ ಗಮನಹರಿಸಿದರೆ ಸೂಕ್ತ ಎಂಬುದು ಸಾರ್ವಜನಿಕರ ಅಭಿಪ್ರಾಯ.

ನಗರದಲ್ಲಿ ಬಿಬಿಎಂಪಿ ಎಡವಟ್ಟಿಗೆ ಒಂದಾ ಏರಡಾ ನೂರಾರು ಸಮಸ್ಯೆಗಳು ಸಾರ್ವಜನಿಕರು ಎದುರಿಸುತ್ತಿದ್ದು ನೂತನ ಮೇಯರ್ ಆಗಿರುವ ಸಂಪತ್ ರಾಜ್ ಆದರೂ ಆದಷ್ಟು ಬೇಗನೆ ಸಮಸ್ಯೆಗಳನ್ನು ಪರಿಹರಿಸಲಿದ್ದಾರಾ ಎಂದು ಕಾದುನೋಡೋಣ.