ಗಾಂಧಿ ಗ್ರಾಮಕ್ಕೆ ಭೇಟಿ ನೀಡಿದ ಸಿಂಗ್..

464

ಬಳ್ಳಾರಿ/ಹೊಸಪೇಟೆ:ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹೊಸೂರು ಗ್ರಾಮಕ್ಕೆ ಮಂಗಳವಾರ ಬೇಟಿ ನೀಡಿದ ಹಂಪಿ ಕ್ಷೇತ್ರದ ಜಿಪಂ ಸದಸ್ಯ ಪ್ರವೀಣ್ ಸಿಂಗ್, ಗ್ರಾಮ ಪಂಚಾಯ್ತಿ ಸದಸ್ಯರನ್ನು ಹಾಗೂ ಗ್ರಾಮಸ್ಥರನ್ನು ಅಭಿನಂದಿಸಿದರು.ಈ ವೇಳೆ ಅಂಗನವಾಡಿ ಕೇಂದ್ರದ ಶೌಚಾಲಯ ನಿರ್ಮಾಣಕ್ಕಾಗಿ 50 ಸಾವಿರ ರೂ. ವಯಕ್ತಿಕ ದೇಣಿಗೆ ನೀಡಿ ನೆರವು ನೀಡಿ ಮಾತನಾಡಿದ ಅವರು, ಸರ್ಕಾರ, ಸ್ವಚ್ಛ ಭಾರತ್ ಮಿಶನ್ ಯೋಜನೆ ಅಡಿಯಲ್ಲಿ ಜಿಲ್ಲೆಯ ವ್ಯಾಪ್ತಿಯ 7 ತಾಲೂಕುಗಳಲ್ಲಿ ಬೇಸ್‌ಲೈನ್ ಸರ್ವೆ ಸಮೀಕ್ಷೆ 2012ರ ಪ್ರಕಾರ ಶೌಚಾಲಯ ಹೊಂದಿರದ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಜಿಲ್ಲೆಯಲ್ಲಿ ಇದುವರೆಗೆ 17 ಗ್ರಾಪಂಗಳ ವ್ಯಾಪ್ತಿಯಲ್ಲಿನ ಎಲ್ಲ ಕುಟುಂಬಗಳಿಗೆ ಅಂದರೆ ಬೇಸ್‌ಲೈನ್ ಸರ್ವೆ ಸಮೀಕ್ಷೆ 2012ರ ಪಟ್ಟಿಯಲ್ಲಿ ಇಲ್ಲದ ಹಾಗೂ ಹೊಸ ಸೇರ್ಪಡೆಯಾದ ಕುಟುಂಬಗಳನ್ನು ಹೊರತುಪಡಿಸಿ ಗ್ರಾಪಂ ವ್ಯಾಪ್ತಿಯಲ್ಲಿನ ಬಾಕಿ ಎಲ್ಲ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿ ಈ ಗ್ರಾಪಂಗಳನ್ನು “ಬಯಲು ಬಹಿರ್ದೆಸೆ ಮುಕ್ತ ಗ್ರಾಪಂಗಳೆಂದು ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ತಾಲ್ಲೂಕಿನ ಕಲ್ಲಹಳ್ಳಿ,ನಂ.10 ಮುದ್ದಾಪುರ, ಮಲಪನಗುಡಿ, ಬೈಲುವದ್ದಿಗೇರಿ, ಹೊಸೂರು ಗ್ರಾಮ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜೆ.ಎನ್.ಹುಲಿಗೆಮ್ಮ, ಉಪಾಧಕ್ಷೆ ಹೆಚ್.ದುರಗಮ್ಮ, ಸದಸ್ಯರಾದ ನಿರಲಿಗಿ ರಾಮಪ್ಪ, ತಳವಾರ ಸೋಮಣ್ಣ, ಎಸ್.ಮೀನಾಕ್ಷಿ, ಬಿ.ಸುದರ್ಶನ್ ನಾಯಕ, ಗುಜ್ಜಲ ದುರಗಮ್ಮ, ಜಯಪದ್ಮ, ಪಿಡಿಓ ಕೆ.ಎಚ್.ಕವಿತಾ, ಎಚ್.ಖಾಜಹುಸೇನ್, ಬಡಗಿ ಕನಕ್ಕಪ್ಪ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.