ಧಾರಕಾರ ಮಳೆಗೆ ಉರುಳಿ ಬಿದ್ದ ಮನೆ

482

ಚಿಕ್ಕಬಳ್ಳಾಪುರ/ ಚಿಂತಾಮಣಿ:ನಗರದಲ್ಲಿ ಸುಮಾರು 3 ಗಂಟೆಗಳಿಗಿಂತಲು ಹೆಚ್ಚು ಸಮಯ ದಿಂದ ಧಾರಕಾರವಾಗಿ ಬೀಳುತ್ತಿರುವ ಮಳೆಯ ಪರಿಣಾಮ ಮನೆಯೋಂದು ಕುಸಿದಿರುವ ಘಟನೆ ವರದಿಯಾಗಿದೆ.

ಚಿಂತಾಮಣಿ ನಗರದ ಎನ್.ಎನ್.ಟಿ ರಸ್ತೆಯ ಕುಂಟೆಗಡ್ಡೆಯ ಸಮೀಪದ ನಿವಾಸಿ ನಾರಾಯಣ ಸ್ವಾಮಿ ಎಂಬುವವರಿಗೆ ಸೇರಿದ ಮನೆ ನಗರದಲ್ಲಿ ಬೀಳುತ್ತಿರುವ ಧಾರಕಾರ ಮಳೆಗೆ ಮನೆ ಕುಸಿದಿದ್ದು ಯಾವುದೇ ರೀತಿಯ ಪ್ರಾಣಾಪಾಯ ಆಗಿಲ್ಲ ವೆಂಬುದು ಸಮಾಧಾನಕರ ಸಂಗತಿಯಾದರೂ, ಮಳೆಯಿಂದ ಆಗಿರುವ ತೊಂದರೆಗೆ ಅಧಿಕಾರಿಗಳು ಮತ್ತು ನಗರಸಭೆಯವರು ಸಂತ್ರಸ್ತರ ನೆರವಿಗೆ ಕೂಡಲೆ ಪರಿಹಾರದ ಹಸ್ತ ಚಾಚಬೇಕಾದ ಅನಿವಾರ್ಯತೆ ಒದಗಿಬಂದಿದೆ.