ನರೇಂದ್ರ ಮೋದಿ ಆರ್ಮಿ ಅಧ್ಯಕ್ಷ ಚಿನ್ನಪ್ಪ ರಾಜುರವರ ಹುಟ್ಟುಹಬ್ಬದ ಅಂಗವಾಗಿ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ

323

ಕೃಷ್ಣರಾಜಪುರ; ನರೇಂದ್ರ ಮೋದಿ ಆರ್ಮಿ ಅಧ್ಯಕ್ಷ ಚಿನ್ನಪ್ಪ ರಾಜುರವರ ಹುಟ್ಟುಹಬ್ಬದ ಅಂಗವಾಗಿ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.
ಕ್ಷೇತ್ರದ ಮಾರತ್‍ಹಳ್ಳಿ ಬಳಿಯ ಕುಂದಲಹಳ್ಳಿ ಕಾಲೋನಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಮೂಲಕ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ನಂತರ ಮಾತನಾಡಿದ ಅವರು ತಮ್ಮ ತಂದೆ ಸಾವನ್ನಪ್ಪಿದಾಗ ಆಸ್ಪತ್ರೆಯಿಂದ ಮನೆಗೆ ಸಾಗಿಸಲು ಹಣದ ಕೊರತೆ ಇತ್ತು, ಕೊನೆಗೆ ಕಾರ್ಪೋರೆಷನ್ ವಾಹನದಲ್ಲಿ ಕೊಂಡೊಯ್ಯಲಾಯಿತು ಇಂತಹ ದುಸ್ಥಿತಿ ಯಾರಿಗೂ ಬರಬಾರದೆಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬಡವರ ಸೇವೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಬದಲ್ಲಿ ನಮೋ ಕಾರ್ಯದರ್ಶಿಗಳಾದ ಲೋಕೆಶ್, ಶೇಖರ್‍ರೆಡ್ಡಿ ನಿತೇಶ್‍ಬಾಬು ಅಸ್ಲಾಂ, ಸಂಘದ ಯುವ ಘಟಕದ ಅಧ್ಯಕ್ಷ ಮಂಜುನಾಥ್, ಎನ್.ಎಲ್, ಮೂರ್ತಿ, ಅನಿಲ್, ಕಿರಣ್ ಮತ್ತಿತರರು ಹಾಜರಿದ್ದರು,
ಸುದ್ದಿ ಚಿತ್ರ 28 ಕೆಆರ್‍ಪಿ1ರಲ್ಲಿ ನರೇಂದ್ರ ಮೋದಿ ಆರ್ಮಿ ಅಧ್ಯಕ್ಷ ಚಿನ್ನಪ್ಪ ರಾಜುರವರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.