ವಾಲ್ಮೀಕಿ ಜಯಂತಿ ಆಚರಣೆ.‌

380

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ವಾಲ್ಮೀಕಿ ಮಹರ್ಷಿ ತಾಲ್ಲೂಕಿನ ತಲಕಾಯಲ ಬೆಟ್ಟ ಕ್ಷೇತ್ರದಲ್ಲಿ ವಾಸವಿದ್ದು ರಾಮಾಯಣ ಮಹಾ ಕಾವ್ಯವನ್ನು ಬರೆಯುವ ಮೂಲಕ ಶಿಡ್ಲಘಟ್ಟ ತಾಲ್ಲೂಕನ್ನು ಈ ದೇಶಕ್ಕೆ ಪರಿಚಯ ಮಾಡುವಂತ ಶ್ರೇಷ್ಠತೆಗೆ ಹೆಸರಾದವರು ವಾಲ್ಮೀಕಿ ಎಂದು ಬಿಜೆಪಿ ಮುಖಂಡ ಡಿ.ಆರ್ ಶಿವಕುಮಾರ್ ಗೌಡ ತಿಳಿಸಿದರು.ನಗರದಚಿಂತಾಮಣಿ ರಸ್ತೆಯ ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಕಛೇರಿಯಲ್ಲಿ ತಾಲ್ಲೂಕು ಬಿಜೆಪಿ ವತಿಯಿಂದ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ ನಂದೀಶ್ ಮಾತನಾಡಿ.ನಮ್ಮ ಕ್ಷೇತ್ರದಲ್ಲಿ ನೆಲಸಿದ ವಾಲ್ಮೀಕಿ ತಮ್ಮ ಜ್ಞಾನದಿಂದ ಮತ್ತು ಅವರ ಆದರ್ಶ ಕೇವಲ ಶಿಡ್ಲಘಟ್ಟಕ್ಕೆ ಇಡೀ ದೇಶದಲ್ಲೇ ಅವರ ಹೆಸರು ಸ್ಥಿರವಾಗಿ ಉಳಿದಿರುವುದು ನಮ್ಮೆಲ್ಲರ ಭಾಗ್ಯ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾಪ್ರಧಾನ ಕಾರ್ಯ ದಶಿ೯ ಸುರೇದ್ರಗೌಡ, ಸುಜಾತಮ್ಮ,ಬೈರೆಗೌಡ, ಮುನಿರಾಜು, ಮುನಿಕೃಷ್ಣಪ್ಪ, ನರಸಿಂಹಪ್ಪ, ರವಿ,ಶ್ರೀಧರ್, ಅಶ್ವಥ್, ಅಹಮದ್, ಮುನಿರಾಜು (ಕುಟ್ಟಿ), ಮುಂತಾದವರು ಹಾಜರಿದ್ದರು