ಚರಂಡಿ ನೀರಿನಿಂದ -ಜನಜೀವನ ಅಸ್ತವ್ಯಸ್ತ

240

ಬಳ್ಳಾರಿ, /ಬಳ್ಳಾರಿ ಮಳೆ ಸುರಿದು ಒಳ ಚರಂಡಿಯ ಮ್ಯಾನ್ ಹೋಲ್‍ನಲ್ಲಿ ತ್ಯಾಜ್ಯ ಸಂಗ್ರಹಗೊಂಡಿದ್ದರಿಂದ ಚರಂಡಿಯ ನೀರು ಸೊಂತ ಲಿಂಗಣ್ಣ ಕಾಲೋನಿ ಸೇರಿದಂತೆ ವಿವಿಧೆಡೆ ಮನೆಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಒಂದು ವಾರದಿಂದ ಬಿಡುವಿಲ್ಲದೇ ಸುರಿದ ಮಳೆಯಿಂದಾಗಿ ಮಹಾನಗರ ಪಾಲಿಕೆಯ 18ನೇ ವಾರ್ಡಿನ ಕಪ್ಪಗಲ್ಲು ರಸ್ತೆ, ಹೌಸಿಂಗ್ ಬೋರ್ಡ್, 8ನೇ ಕ್ರಾಸ್, ಬಾಲಭಾರತಿ ಶಾಲೆಯ ಪ್ರದೇಶ, ಬದರಿ ನಾರಾಯಣ ದೇವಸ್ಥಾನ ಪ್ರದೇಶ ಸೇರಿ ದಂತೆ ಹಲವೆಡೆ ಚರಂಡಿ ನೀರು ಸಂಗ್ರಹಗೊಂಡು ಜನಜೀವನ ತೊಂದರೆಗೀಡಾಗಿದೆ.

ಪ್ರಮುಖವಾಗಿ ಸೊಂತ ಲಿಂಗಣ್ಣ ಕಾಲೋನಿಯ ನಿವಾಸಿ ಪತ್ರಕರ್ತ ಗಣೇಶ್ ಇನಾಂದಾರ್ ಸೇರಿ ದಂತೆ ಹಲವು ಮನೆಗಳಲ್ಲಿ ಚರಂಡಿ ನೀರು ನುಗ್ಗಿ ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗಿದ್ದಾರೆ.

ಸ್ಥಳೀಯ ಪಾಲಿಕೆ ಸದಸ್ಯೆ ಚಂದ್ರಕಲಾ ಅವರಿಗೆ ವಿಷಯ ತಿಳಿಸಿದರೂ ಅಧಿಕಾರಿಗಳು ಇನ್ನೂ ಚರಂಡಿಯಲ್ಲಿ ಸಂಗ್ರಹಗೊಂಡ ತ್ಯಾಜ್ಯ ಸರಿಪಡಿ ಸಿಲ್ಲ. ಇನ್ನಾದರೂ ಪಾಲಿಕೆ ಆಯುಕ್ತರು ಬಿಗಡಾಯಿಸಿದ ಪರಿಸ್ಥಿತಿಯನ್ನು ಸರಿಪಡಿಸ ಬೇಕು. ಇಲ್ಲವಾದರೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.