*ನೂತನ ಮುಸ್ಲಿಂ ಧರ್ಮಗುರುಗಳಾಗಿ ನೂರ್ ಬಾಷಾ ಸಾಹೇಬ್*

357

ಬಳ್ಳಾರಿ /ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಮುಸ್ಲಿಂ ಬಾಂಧವರು ಕರ್ನಾಟಕದಲ್ಲಿ ಇತರೆ ಧರ್ಮೀಯ ರೊಂದಿಗೆ ಸೌಹಾರ್ದತೆಯಿಂದ ಜೀವಿಸುತ್ತಿದ್ದು, ಅಂತಹವರಿಗೆ ಸಾತ್ವಿಕ ಮಾರ್ಗದಲ್ಲಿ ಮುನ್ನಡೆಸುವ ಸಲುವಾಗಿ ನೂರ್ ಬಾಷಾ ಸಾಹೇಬ್ ಅವರು ನೂತನವಾಗಿ ಧರ್ಮ ಗುರುಗಳಾಗಿ ಪೀಠ ಅಲಂಕರಿಸಿದರು.

ಬಳ್ಳಾರಿಯ ಗುಗ್ಗರಹಟ್ಟಿ-ಹೊನ್ನಳ್ಳಿ ನಡುವಿನ ಪ್ರದೇಶದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನೂರ್ ಬಾಷಾ ಸಾಹೇಬ್ ಅವರು ಮುಸ್ಲಿಂ ಸಮುದಾಯ ಮತ್ತು ಇತರೆ ಸಮುದಾಯದ ಶಿಷ್ಯರು, ಭಕ್ತರು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪೀಠ ಅಲಂಕರಿಸಿದರು.

ದಾದಾಪೀರ್ ಸಾಹೇಬ್ ಅವರ ಬಳಿಕ ನೂರ್ ಬಾಷಾ ಸಾಹೇಬ್ ವಲಿ ಆಲಿಯಾಸ್ ಸೈಯದ್ ಆಗಿ ಪೀಠ ಅಲಂಕರಿಸಿ, ಸಮಾಜದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಸಂಕಲ್ಪ ತೊಟ್ಟರು.

ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಮದರಸಾ ಕೇಂದ್ರಗಳನ್ನು ಆರಂಭಿಸಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಧರ್ಮದ ಕುರಿತು ಬೋಧನೆ ಮಾಡುವ ಉದ್ದೇಶವಿದೆ ಎಂದರು. ಜನರಲ್ಲಿ ಧಾರ್ಮಿಕ ಭಾವನೆಗಳನ್ನು ಹಂಚುವ ಮೂಲಕ ಪರಸ್ಪರರಲ್ಲಿ ಮಾನವೀಯತೆ ಗುಣಗಳನ್ನು ಬಿಂಬಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಇಬ್ರಾಹಿಂ ಬಾಬು, ಬಿಜೆಪಿ ಮುಖಂಡರಾದ ಕೆಎಸ್ ದಿವಾಕರ್ ಇನ್ನಿತರರು ಇದ್ದರು.