ತುರ್ತಕಾಲುವೆಗಳ ಸ್ವಚ್ಚತಾ ಕಾರ್ಯಕ್ಕೆ ಚಾಲನೆ

329

ಬಳ್ಳಾರಿ /ಹೊಸಪೇಟೆ ಐತಿಹಾಸಿಕ ವಿಜಯನಗರ ಕಾಲದ ತುರ್ತ ಕಾಲುವೆಗಳ ಸ್ವಚ್ಚತೆ ಕಾಪಾಡು ವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದು ಸಮಾಜ ಸೇವಕ ಎಚ್.ಆರ್ ಗುರುದತ್ ಹೇಳಿದರು. ಶನಿವಾರ ಹಂಪಿ ವ್ಯಾಪ್ತಿಯಲ್ಲಿ ಬರುವ ತುರ್ತಕಾಲುವೆಗಳ ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಾಯ, ಬಸವ, ಕಾಲಘಟ್ಟ, ಬೆಲ್ಲ ಕಾಲವೆಗಳ ಸಿಲ್ಟ್ ಮತ್ತು ಗಂಗೆಬಳ್ಳಿ ಮುಂತಾದ ತ್ಯಾಜ್ಯಗಳನ್ನು ತೆಗೆದು ರೈತರಿಗೆ ನೀರು ಸರಾಗವಾಗಿ ಹರಿಯುವಂತಾಗಬೇಕು ಎಂದರು. ತಾಲೂಕಿನ ಇಪ್ಪಿತೇರಿ ಮಾಗಾಣೆ ಸೇರಿದಂತೆ ನಿಂಬಾಪುರ, ಹಂಪಿ ಮಾಗಣೆ, ಗೋರಿ ಮಾಗಣೆ, ಬುಕ್ಕಸಾಗರ, ವೆಂಕಟಾಪುರ ಮಾಗಣೆಗಳಿಗೆ ಈ ಕಾಲುವೆಗಳು ಜೀವ ಜಲವಾಗಿರುವುದರಿಂದ ಇವುಗಳನ್ನು ಸಂಪೂರ್ಣವಾಗಿ ಸ್ವಚ್ಚ ಗೊಳಿಸಲಾಗುವುದು ಎಂದರು. ತಾಲೂಕು ಪಂಚಾಯತಿ ಸದಸ್ಯ ಪಾಲಣ್ಣ, ಮುಖಂಡರಾದ ಅಯ್ಯಳಿ ನವೀನ್, ಶೋಯೆಬ್, ಮಲ್ಲಿಕಾರ್ಜುನ್ ಬಾರೆಮರ, ಪ್ರಕಾಶ್, ಓಬಣ್ಣ, ಗೋಪಿನಾಥ ಮುಂತಾದವರು ಭಾಗವಹಿಸಿದ್ದರು.