ಬಯಲು ಶೌಚ ಮುಕ್ತ ಕ್ಷೇತ್ರ ನಿರ್ಮಾಣ ಮಾಡಲು ಶಾಸಕರ ಕರೆ

165

ಬಳ್ಳಾರಿ /ಹೊಸಪೇಟೆ : ಕ್ಷೇತ್ರವನ್ನು ಬಯಲು ಶೌಚ ಮುಕ್ತ ಮಾಡುವ ಹಿನ್ನಲೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವುದಕ್ಕಾಗಿ ಕ್ಷೇತ್ರದ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಆನಂದ್ ಸಿಂಗ್ ಹೇಳಿದರು.
ಗ್ರಾಮವಾಸ್ತವ್ಯದ 34ನೇ ದಿನ ಕಮಲಾಪುರದ ಕೊರವರ ಓಣಿಯಲ್ಲಿನ ಸಾಮೂಹಿಕ ಶೌಚಾಲಯ ದುಸ್ಥಿತಿ ಪರಿಶೀಲನೆ ಮಾಡಿದ ಆನಂದ್ ಸಿಂಗ್ ಕೂಡಲೇ ಶೌಚಾಲಯ ಸುತ್ತಮುತ್ತಲ ವಾತವರಣ ಶುಚಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದೇ ವೇಳೆ ಟ್ರಾನ್ಸ್ ಫರ್ಮಾರ್ ಸೆಟ್ಆಪ್ ಬಾಕ್ಸ್ ದುರಸ್ತೆಯ ದೂರಿನ ಹಿನ್ನಲೆ ಸ್ಥಳದಲ್ಲಿಯೇ ನಿಂತು ಅದನ್ನು ಬದಲಾಯಿಸಿದರು.
ಮತ್ತೊಂದೆಡೆ ಕಾಕುಬಾಳ ಗ್ರಾಮದಲ್ಲಿ 4.90 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮಾಜಿ ಶಾಸಕ ರತನ್ ಸಿಂಗ್ ಮತ್ತು ಧರ್ಮೇಂದ್ರ ಸಿಂಗ್ ಭೂಮಿ ಪೂಜೆ ನೆರವೇರಿಸಿದರು.