ಪರಿಶಿಷ್ಟ ಜಾತಿಗೆ ಸೇರ್ಪಡೆ ಒತ್ತಾಯ

319

ಬೆಂಗಳೂರು/ಕೆ.ಆರ್.ಪುರ:– ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಸರ್ಕಾರ ಅನುಮೋಧನೆಗೆ ಕೂಡಲೆ ಶಿಫಾರಸ್ಸು ಹೊರಡಿಸಬೇಕೆಂದು ಆಗ್ರಹಿಸಿ ಕೆಆರ್ಪುರ ಮಾಚಿ ಮಡಿವಾಳ ಕ್ಷೇಮಾಭಿವೃಧ್ಧಿ ಸಂಘದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಆರ್ ಪುರ ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಕೃಷ್ಣಪ್ಪ ಮಾತನಾಡಿದ ಅವರು, ಆಡಳಿತಾರೂಡ ಪಕ್ಷ ಕೇವಲ ಮತಗಳಿಕೆಗೆ ಸಮುದಾಯಗಳ ಓಲೈಕೆಯಲ್ಲಿ ತೊಡಗುವುದು ಬಿಟ್ಟು ಸಮಾಜದಲ್ಲಿ ತಳಮಟ್ಟದಲ್ಲಿ ಜೀವಿಸುತ್ತಿರುವ ಸಮುದಾಯದ ಜನರ ಹಕ್ಕನ್ನು ಎತ್ತಿಹಿಡುಯುವ ಮೂಲಕ ಸಮೃದ್ಧ ಸಮಾಜ ನಿರ್ಮಿಸಬೇಕು, ಶಿಕ್ಷಣ, ರಾಜಕೀಯ, ಆರ್ಥಿಕತೆ, ಸಮಾಜಿಕ ನೆಲೆಗಟ್ಟುಗಳಲ್ಲಿ ಹಿಂದುಳಿದಿರುವ ಸಮಾಜ ಮಡಿವಾಳರದ್ದು, ಪರರ ವಸ್ತ್ರ ಶುಚಿಗೊಳಿಸುವ ಮೂಲಕ ಜೀವನ ನಡೆಸುತ್ತಿರುವ ನಮ್ಮ ಸಮಾಜದ ಜನರು ಸೂರಿಲ್ಲದೆ, ಮೂಲಭೂತ ಸೌಕರ್ಯಗಳಿಲ್ಲದೆ ಸಂಕಷ್ಟದ ಜೀವನ ಸಾಗಿಸುತ್ತಿದ್ದು ಎಲ್ಲರಂತೆ ನಮ್ಮ ಸಮುದಾಯವೂ ಉನ್ನತ ಜೀವನ ಸಾಗಿಸಲು ಪರಿಶಿಷ್ಟ ಜಾತಿಗೆ ಸೇರ್ಪಡಿಸುವ ಅನುಮೋದನೆ ಯನ್ನು ಸರ್ಕಾರ ಶಿಪಾರಸ್ಸು ಮಾಡಬೇಕು, ಅನ್ನಪೂರ್ಣಮ್ಮನವರ ವರದಿ ಹಾಗು ಇತರೆ ರಾಜ್ಯಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದಂತೆ ರಾಜ್ಯದಲ್ಲಿಯೂ ಆಗಬೇಕು, ಈ ಹಿಂದೆಯೂ ಸಹ ಸಮಾವೇಷ ಏರ್ಪಡಿಸಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸು ವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಆಂಜನೇಯರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ವಾಗಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ ಕೆಆರ್ಪುರದ ಬಸವನಪುರ ಗ್ರಾಮದಲ್ಲಿ ಸವರ್ೇ ನಂ.26ರಲ್ಲಿ ದೋಭಿ ಘಾಟ್ ನಿಮಾರ್ಣಕ್ಕಾಗಿ ಮಂಜೂರು ಮಾಡಿದ್ದ 1.20ಎಕರೆ ಸ್ಥಳವನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದ್ದು ಪಾಲಿಕೆ ವಶಪಡಿಸಿಕೊಂಡು ಸರ್ವೇ ಕ್ರಮಜರುಗಿಸಿಲ್ಲ, ಸ್ಥಳದಲ್ಲಿ ಕೆಲ ಪ್ರಭಾವಿಗಳು ಜಾಗವನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಹಲವು ಭಾರಿ ಮನವಿಗಳನ್ನು ಸಲ್ಲಿಸಿದ್ದರೂ ಕ್ರಮಗಳಾಗಿಲ್ಲ, ಈ ಸ್ಥಳದ ಮರು ಸರ್ವೇ ನಡೆಸಿ ಸಮಾಜಕ್ಕೆ ದೊರಕಬೇಕಿರುವ ನ್ಯಾಯಯುತವಾದ ಸವಲತ್ತನ್ನು ಕೊಡಿಸಬೇಕಾಗಿ ವಿನಂತಿಸಿದ್ದಾರೆ, ಮನವಿ ಸ್ವೀಕರಿಸಿರುವ ವಿಶೇಷ ತಹಶೀಲ್ದಾರ್ ಲಕ್ಷ್ಮೀ ಮಡಿವಾಳ ಸಮುದಾಯದ ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಕ್ರಮಜರುಗಿಸಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಮ್.ಶ್ರೀನಿವಾಸುಲು, ಪ್ರಧಾನ ಕಾರ್ಯದರ್ಶಿ ಕೆ.ಬಿ.ನಾಗರಾಜ್, ಜಿ.ಮುನಿರಾಜು, ಮುನಿಸ್ವಾಮಿ, ಮುನಿನಾರಾಯಣ, ಸೇರಿದಂತೆ ಇತರರಿದ್ದರು. ಸುದ್ದಿಚಿತ್ರ: ಇಲ್ಲಿಯ ತಹಶೀಲ್ದಾರ್ ಕಚೇರಿ ಬಳಿ ಕೆಆರ್ಪುರ ಮಾಚಿ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಿಕೊಳ್ಳಲು ಅನುಮೋದನೆಯನ್ನು ಶಿಫಾರಸ್ಸು ಮಾಡುವಂತೆ ವಿಶೇಷ ತಹಶೀಲ್ದಾರ್ ಲಕ್ಷ್ಮೀರಿಗೆ ಮನವಿ ಸಲ್ಲಿಸಲಾಯಿತು.