37ನೇ ದಿನಕ್ಕೆ ಕಾಲಿಟ್ಟ ಶಾಸಕರ ಗ್ರಾಮವಾಸ್ತವ್ಯ

299

ಬಳ್ಳಾರಿ /ಹೊಸಪೇಟೆ: ತಾಲ್ಲೂಕಿನ ಕಮಲಾಪುರ ದಲ್ಲಿ ಗ್ರಾಮವಾಸ್ತವ್ಯದಲ್ಲಿದ್ದ ಶಾಸಕ ಆನಂದ್ ಸಿಂಗ್ ಮಂಗಳವಾರ ಹಿರೇಕೇರಿಯಲ್ಲಿ ಪಾದ ಯಾತ್ರೆ ನಡೆಸಿದರು.

ಕಮಲಾಪುರದ ಹಿರೇಕೇರಿಯಲ್ಲಿ ಪಾದಯಾತ್ರೆ ನಡೆಸಿದ ಶಾಸಕ ಆನಂದ್ ಸಿಂಗ್ ಸಾರ್ವಜನಿಕರ ದುಃಖ ದುಮ್ಮಾನ ಆಲಿಸಿದರು. ಈ ಸಂದರ್ಭ ದಲ್ಲಿ ಕೇರಿಯ ಯಜಮಾರು, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಸಮೀವುಲ್ಲಾ, ಮಾಜಿ ಶಾಸಕ ಎಸ್.ರತನ್ ಸಿಂಗ್ ಶಾಸಕರಿಗೆ ಸಾಥ್ ನೀಡಿದರು. ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ಕರೆಸಿಕೊಂಡು ಸೂಕ್ತ ಮಾರ್ಗದರ್ಶನ ಮಾಡಿ ಕೇರಿ ಅಭಿವೃದ್ಧಿಗೆ ಕ್ರಮ ಕೈಗೊಂಡರು. ಶಾಸಕರ ಗ್ರಾಮವಾಸ್ತವ್ಯ 37ನೇ ದಿನಕ್ಕೆ ಮುನ್ನೆಡಿದಿದೆ.