ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ.

415

ನೂರಾನಿ ಹೆಲ್ಪಿಂಗ್ ಹ್ಯಾಂಡ್ಸ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರ.

ಚಿಕ್ಕಬಳ್ಳಾಪುರ/ಚಿಂತಾಮಣಿ:- ನಗರದ ೧ ನೇ ವಾರ್ಡ್‌ನ ವೆಂಕಟ ಗಿರಿ ಕೋಟೆಯಲ್ಲಿ ನೂರಾನಿ ಹೆಲ್ಪಿಂಗ್ ಹ್ಯಾಂಡ್ಸ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವೆಂಕಟಗಿರಿ ಕೋಟೆ ವತಿಯಿಂದ ಹಾಗೂ ಲಯನ್ಸ್ ಸರ್ವೀಸ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯ ನೂರಾನಿ ಮಸೀದಿ ಮುಂಭಾಗ ಏರ್ಪಡಿಸಲಾಗಿತ್ತು.

ಈ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯಲ್ಲಿ ಹಿರಿಯರಿಗೆ ಕಣ್ಣಿನ ಸಂಬಂಧಪಟ್ಟ ತೊಂದರೆಗಳಿಗೆ ಉಚಿತ ನೇತ್ರ ಸಲಹೆ ,ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರು ಆ ದಿನವೇ ಚಿಂತಾಮಣಿ ಲಯನ್ಸ್ ಜಿ.ಇ.ಎಫ್ ಕಣ್ಣಿನ ಆಸ್ಪತ್ರೆ ಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಈ ಶಸ್ತ್ರಚಿಕಿತ್ಸೆ ಯಲ್ಲಿ ಸುಮಾರು 200 ಕ್ಕಿಂತ ಜನರಿಗೆ ತಪಾಸಣೆ ಮಾಡಲಾಯಿತು. ಇದರಲ್ಲಿ 30 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ,ಹಾಗೂ 30 ರಿಂದ 40 ಜನರಿಗೆ ಕಣ್ಣಿನ ಕನ್ನಡಕ ವನ್ನು ನೂರಾನಿ ಹೆಲ್ಪಿಂಗ್ ಹ್ಯಾಂಡ್ಸ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡಲಾಯಿತು.
ಈ ಸಂದರ್ಭದಲ್ಲಿ ನೂರಾನಿ ಹೆಲ್ಪಿಂಗ್ ಹ್ಯಾಂಡ್ಸ್ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಸೀಮ್ ಅಹಮದ್, ಉಪಾಧ್ಯಕ್ಷರಾದ ಮೊಹಮ್ಮದ್ ಇಸ್ಮಾಯಿಲ್ ,ಕಾರ್ಯದರ್ಶಿ ಮುದಸ್ಸಿರ್ ವಹಬ್ ,ಸಹಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಜ್ಗಾರ್ ,ಮತ್ತು ಸದಸ್ಯರು ಮೊಕ್ಸುದ್ ,ಪೀರ್ ಪಾಷ ,ದಾದಾ ಪೀರ್ ,ಮೊಹಮ್ಮದ್ ರಿಜ್ವಾನ್ ,ಫಾರುಕ್ ಪಾಷ ,ತೌಸೀಫ ಮುದ್ದಸೀರ್ ,ಅಫಜಲ್ ಪಾಷ ,ಸೈಪುಲ್ಲ ,ಜಾಕಿರ್ ,ಮುಜೀರ್ ,ಆಸೀಫ ,ಮುನ್ವರ್ ,ಇಮ್ರಾನ್ ಪಾಷ , ಹಾಗೂ ಡಾ ಸುಂದರಮ್ ಶೆಟ್ಟಿ ,ಯಿರ್ಫತ್ ಜಿಯಾ ,ಸುಜಾಯ್ ಉಪಸ್ಥಿತಿಯ ಇದ್ದರು.