ನಿಂತ ನೀರಿನಿಂದ ವಾಹನ ಸವಾರರ ಪರದಾಟ

299

ಬಳ್ಳಾರಿ./ ಬಳ್ಳಾರಿ ಗಣಿನಾಡು ಬಳ್ಳಾರಿಯಲ್ಲಿ ರಾತ್ರಿ ೧೨ ಗಂಟೆಯಿಂದ ಮಳೆ ಸುರಿದಿದೆ.
ರಾತ್ರಿ ೧೨ ಗಂಟೆಯಿಂದ ಸುರಿದ ಮಳೆರಾಯ ಇನ್ನೂ ಜಿಟಿ, ಜಿಟಿ ಮಳೆಯಾಗುತ್ತಿದೆ. ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಅಂಡರ್ ಬ್ರೀಡ್ಜ್ ನಲ್ಲಿ ಮತ್ತೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರಾತ್ರಿಯಿಡಿ ಸುರಿದ ಮಳೆಗೆ ಕರಂಟ್ ಕಟ್ ಮಾಡಲಾಗಿತ್ತು. ಗುಡುಗು ಸಹಿತ ಭಾರಿ ಮಳೆ ಬಳ್ಳಾರಿಯಲ್ಲಿ ಆಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನ ಸ್ಲಂ ಪ್ರದೇಶದಲ್ಲಿ ನೀರು‌ನುಗ್ಗಿದ್ದು, ಮತ್ತೆ ಡೆಂಗ್ಯೂ, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜನರಿದ್ದಾರೆ. ನಗರದ ಹಳೇ ಬಸ್ ನಿಲ್ದಾಣದಲದಲಿ ಸಂಪೂರ್ಣ ನೀರು ನಿಂತಿದ್ದು, ಬಸ್ ಗಳು ನಿಂತ ನೀರಿನಲ್ಲೆ ನಿಂತಿವೆ. ಇನ್ನೂ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಅಂಡರ್ ಪಾಸ್ ನಲ್ಲಿ ಪದೇ, ಪದೇ ಮಳೆ ನೀರು ನಿಂತ ಕಾರಣ ಸಮಸ್ಯೆಯಾಗಿದೆ. ಇದನ್ನು ಮೇಲ್ಸೆತುವೆ ಕಾಮಗಾರಿ ಪ್ರಾರಂಭಮಾಡಿ ೮ ವರ್ಷ ಕಳೆದರೂ ನಿರ್ಮಾಣವಾಗಿಲ್ಲ ಎಂದು ಸಾರ್ಜಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.