ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ

362

ಬಳ್ಳಾರಿ /ಹೊಸಪೇಟೆ: ತಾಲೂಕಿನ ಬಯಲೊದ್ದಿಗೇರಿ ಗ್ರಾಮದಲ್ಲಿ ಬುಧವಾರ ತಡ ರಾತ್ರಿ ಭಾರಿ ಮಳೆಯಾಗಿದ್ದು, ಗ್ರಾಮದ ಗುಂಡಪ್ಪ ನವರ ಈಶ್ಬರಪ್ಪ ಎಂಬುವವರ ಉಳ್ಳಾಗಡ್ಡಿ ಗುಡಿಸಲಿಗೆ ಸಿಡಿಲು ಬಡಿದು ರೈತ ಪರಿಕರಗಳು ಸುಟ್ಟು ಲಕ್ಷಾಂತರ ರೂಗಳ ನಷ್ಟವಾಗಿದೆ.
ಉಳ್ಳಾಗಡ್ಡಿ (ಈರುಳ್ಳಿ) ಗುಡಿಸಲಿನಲ್ಲಿದ್ದ ಒಂದು ಕ್ವಿಂಟಲ್ ಅಕ್ಕಿ, ಐದು ಪಾಕೇಟ್ ಈರುಳ್ಳಿ, ಎಡೆಕುಂಟೆ, ಹತ್ತಿಕುಂಟೆ, ನೇಗಿಲು, 12 ಕಲ್ಲು ಕಂಬಗಳು ಸೇರಿ ಹಲವು ರೈತ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.ಗುಡಿಸಲು ಸಂಪೂರ್ಣ ಭಸ್ಮವಾಗಿದೆ.ಪಕ್ಕದಲ್ಲಿದ್ದ ತೆಂಗಿನ ಮರ ಸುಟ್ಟುಹೋಗಿದೆ