ಯಮಸ್ವರೂಪಿ ಗುಂಡಿಯನ್ನು ಮುಚ್ಚಿ.

249

ಗರಸಭೆಯ ನಿರ್ಲಕ್ಷ್ಯ ಅನಾಹುತಕ್ಕೆ ಆಹ್ವಾನ.

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ನಗರದ ವಾಸವಿ ಶಾಲೆಯ ಸಮೀಪ ಇರುವ 22 ನೇ ವಾರ್ಡ್ ಬೋವಿ ನಗರ ರಸ್ತೆ ಹಾಗೂ ಸಂತೆ ನಡೆಯುವ ಸ್ಥಳದಲ್ಲಿ ಮೋರಿ ಛಾವಣಿ ಕುಸಿದು ಬಿದ್ದು ಸುಮಾರು ಒಂದು ತಿಂಗಳೇ ಕಳೆಯುತ್ತಾರೆ ಬರುತ್ತಿದ್ದರು ಸಂಬಂಧ ಪಟ್ಟ ನಗರಸಭೆ ಈ ಗುಂಡಿ ಯನ್ನು ಮುಚ್ಚಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಲ್ಲಿನ ಸಾರ್ವಜನಿಕರ ಆರೋಪವಾಗಿದೆ

ನಗರದ ಸಂತೆ ಬೀದಿಯಿಂದ ಪೂರ್ವಕ್ಕೆ ಶಾಮಣ್ಣ ಬಾವಿ ಕಡೆ ಮಯೂರ ಸರ್ಕಲ್ ಕಡೆಗೆ ತಲುವ ಮಾರ್ಗದ ರಸ್ತೆ ಇದಾಗಿದ್ದು ಈ ರಸ್ತೆಯ ಚರಂಡಿ ಮೋರಿ ಕುಸಿದು ಬಿದ್ದಿದ್ದಿರುವುದರಿಂದ ಪ್ರತಿದಿನ ಓಡಾಡುವ ಪಾದಚಾರಿಗಳು ಹಾಗೂ ದ್ವಿಚಕ್ರ ಹಾಗೂ ಇನ್ನಿತರ ವಾಹನ ಸವಾರರು ರಾತ್ರಿ ವೇಳೆಯಲ್ಲಿ ಈ ಗುಂಡಿಯಲ್ಲಿ ಬಿದ್ದಿರುವ ನಿದರ್ಶನಗಳಾಗಿವೆ.

ಇದೇ ರಸ್ತೆಯ ಮಾರ್ಗದಲ್ಲಿ ಶಾಸಕ ಎಂ. ರಾಜಣ್ಣನವರು ಮನೆಗೆ ಇದ್ದು ಪ್ರತಿದಿನ ಇದೇ ರಸ್ತೆಯಲ್ಲಿ ತಮ್ಮ ಕಾರಿನ ಮೂಲಕ ಓಡಾಡುತ್ತಿದ್ದರು ಸಹ ಶಾಸಕರ ಕಣ್ಣಿಗೆ ಇಲ್ಲಿ ಕುಸಿದು ಬಿದ್ದಿರುವ ಗುಂಡಿ ಕಾಣಲಿಲ್ಲವೆ? ಎಂಬುಂದು ಯಕ್ಷ ಪ್ರಶ್ನೆಯಾಗಿದ್ದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳು ಅನುಭವಿಸಿ ಅವರಿಗೆ ಎದುರಾಗುವ ಅಪಾಯಗಳು ನಿವಾರಿಸಲು ಮಂದಾಗದ ಶಾಸಕ ಎಂದು ಅಲ್ಲಿನ ಸಾರ್ವಜನಿಕರ ಆಕ್ರೋಶವಾಗಿದೆ.

ಅನಾಹುತಗಳಿಗೆ ಎಡೆ ಮಾಡುವಂತಿರುವ ರಸ್ತೆಯ ಮಧ್ಯೆ ಕುಸಿದು ಬಿದ್ದಿರುವ ಗುಂಡಿಯನ್ನು ಕೂಡಲೇ ಸರಿಪಡಿಸಿ ಮುಂದಾಗುವ ಅಪಾಯಕಾರಿಯಾದ ಅನಾಹುತಗಳನ್ನು ತಡೆಯಬೇಕೆಂದು ನಮ್ಮೂರು ಟಿವಿ ಆಶಯವಾಗಿದೆ.