ಟಮ್ಯಾಟೊ ಗಿಡಗಳನ್ನು ನಾಶಪಡಿಸಿದ ಕಿಡಿಗೇಡಿಗಳು

339

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದಲ್ಲಿ ಒಂದು ಎಕರೆ ಜಮೀನಿನಲ್ಲಿ ಬೆಳಸಿದ ಟಮ್ಯಾಟೊ ಗಿಡಗಳನ್ನು ನಾಶ ಪಡಿಸಿದ್ದಾರೆ.

ಸಾದಪ್ಪ ಬಿನ್ ಮುನಿಬಚ್ಚಪ್ಪ ರವರಿಗೆ ಸೇರಿದ ಸರ್ವೆ ನಂ 187 ರಲ್ಲಿನ ಒಂದು ಎಕರೆ ಜಮೀನನ್ನು ಭೋಗ್ಯಕ್ಕೆ ತೆಗೆದುಕೊಂಡು ಸದರಿ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದ ರೆಡ್ಡಪ್ಪ ರೆಡ್ಡಪ್ಪ ರವರು ಎರಡೂವರೆ ತಿಂಗಳ ಹಿಂದೆ ಜಮೀನಿನಲ್ಲಿ ಟೊಮ್ಯಾಟೊ ಗಿಡಗಳನ್ನು ನಾಟಿ ಮಾಡಿದ್ದರು.ಇದುವರೆಗೆ ಸುಮಾರು 2 ರಿಂದ 3 ಲಕ್ಷ ರೂ ವರೆಗೂ ಸಾಲಮಾಡಿದ್ದರೆ ಎಂದು ರೆಡ್ಡಪ್ಪ ತಿಳಿಸಿದ್ದಾರೆ.

ಎರಡು ಸಲ ಟೊಮ್ಯಾಟೊ ಹಣ್ಣುಗಳನ್ನು ಮಾರ್ಕೆಟ್ ಗೆ ಹಾಕಿದು. ಈಗಾಗಲೇ ಒಂದು ಬಾಕ್ಸ್ ಸುಮಾರು 5 ನೂರು ರಿಂದ 7 ನೂರು ರೂಪಾಯಿ ವರೆಗೂ ಹೆಚ್ಚು ಬೆಲೆ ಇದೆ.ರೈತ ಈಗಾಗಲೇ ಒಂದು ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ರೆಡ್ಡಪ್ಪ ಆರೋಪಿ ಸಿದ್ದಾರೆ.

ಬೆಳೆಯ ನಷ್ಟ ಪರಿಹಾರವನ್ನು ಕಾನೂನು ರೀತ್ಯಾ ಮಾಡಿಕೋಡಬೇಕಾಗಿ ರೆಡ್ಡಪ್ಪ ತಿಳಿಸಿದ್ದಾರೆ.
ಅದೇ ಊರಿನ ಇಬ್ಬರು ಅನುಮಾನ ವ್ಯಕ್ತಿಗಳ ಅಶೋಕ್ ಮತ್ತು ಮೇಲೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.