ಬೆಲ್ಲವತ್ತ ಜಲಾಶಯಕ್ಕೆ ಬಾಗಿನ

250

ಚಾಮರಾಜನಗರ/ ಯಳಂದೂರು:ಸಮೀಪದ ಬಿಳಿಗಿರಿ ರಂಗನಬೆಟ್ಜದ ತಪ್ಪಲಿನ ಮುರಟಿ ಪಾಳ್ಯದ ಬಳಿಯ ಬೆಲ್ಲವತ್ತ ಜಲಾಶಯಕ್ಕೆ: ಶಾಸಕ ಎಸ್. ಜಯಣ್ಡ ಶನಿವಾರ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಸತತ ಬರಗಾಲ ದಿಲದ ನಾಡು ತತ್ತರಿಸಿತ್ತು ಆದರೆ ಈ ಬಾರಿ ರಾಜ್ಯದಲ್ಲಿ ಸುಭಿಕ್ಷವಾಗಿ ಮಳೆಯಾಗುತ್ತಿದೆ. ವ್ಯಾಪ್ತಿಯ ಬಹುತೇಕ ಜಲಾಶಯಗಳು, ಕೆರೆ, ಕಟ್ಟೆಗಳು ತುಂಬಿವೆ. ಎಡೆಬಿಡದೆ ಮಳೆ ಯಾಗುತ್ತಿರುವುದ ರಿಂದ ರೈತರಲ್ಲಿ ಮಂದಹಾಸ ಮೂಡಿಸಿದೆ. ಬೆಟದ ತಪ್ಷ ಲಿನಲ್ಲಿರುವ ಬೆಲ್ಲವತ್ತ ಡ್ಯಾಂ ನಲ್ಲಿ ನಾಲ್ಕು ವರ್ಷಗಳನಂತರ ಸಂಪೂರ್ಣ ವಾಗಿ ನೀರು ತುರಿಬಿದೆ. ಇದರಿಂದ ಈ ಭಾಗದ ನೂರಾರು ಎಕರೆ ಪ್ರದೇಶದ ಜಮೀನುಗಳಿಗೆ ಅನುಕೂಲವಾಗಲಿದೆ. ಜಾನುವಾರುಗಳಿಗೂ ಸಮೃದ್ಧ ಮೇವು ದೊರಕುತ್ತಿದೆ. ಕ್ಷೇತ್ರದ ವ್ಯಾಪ್ತಿ ಯಲ್ಲಿ ಬರುವ ಯಳಂದೂರು ತಾಲ್ಲೂಕಿನಲ್ಲಿ ಪ್ರತಿ ಗ್ರಾಮದಲ್ಲೂ ಕೆರೆಗಳಿರುವುದು ಇದರ ವಿಶೇಷ ವಾಗಿದೆ. ಈಗ ಮಳೆಯಿಂದ ಬಹುತೇಕ ಎಲ್ಲ ಕೆರೆಗಳಲ್ಲೂ ಸಾಕಷ್ಟು ನೀರು ತುಂಬಿರುವುದರಿಂದ ವ್ಯವಸಾಯ ಚಟುವಟಿಕೆಗಳಿಗೆ ಅನುಕೂಲ ವಾಗಲಿದೆ. ಅಂತರ್ಜಲ ವೃದ್ಧಿಗೂ ಇದು ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳ ಅಭಿವೃದ್ಧಿ ಮಾಡಲಾಗುವುದು. ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯಗಳೂ ಭರ್ತಿಯಾಗಿದ್ದು, ಇದರ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೂ ನೀರು ತುಂಬಿಸಲು ಕ್ರಮ ವಹಿಸಲಾಗುವುದು ಎಂದರು. ಇದರೊಂದಿಗೆ ಹೊಂಗನೂರು ಹಿರಿಕೆರೆಯೂ ತುಂಬಿರುವುದ ರಿಂದ ಇದಕ್ಕೂ ಬಾಗಿನ ಅರ್ಪಿಸಲಾಯಿತು.

ಜಿಲ್ಲಾ ಪಂ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ತಾಪಂ ಅಧ್ಯಕ್ಷ ಎಚ್.ವಿ. ಚಂದ್ರು, ಸದಸ್ಯ ಮಹದೇವ ಗ್ರಾಪಂ ಅಧ್ಯಕ್ಷೆ ನಿರ್ಮಲಾ ರಾಮು, ಕೆ ಎಂ ಎಫ್ ನಿರ್ದೇಶಕ ತೊಟೇಶ್, ಕಿನಕಹಳ್ಳಿ ರಾಚಯ್ಯ, ಮುಡಿಗುಂಡ ಶಾಂತರಾಜು, ನೀರಾವರಿ ಇಲಾಖೆ ಜೆಇ ಸುರೇಶ್ ಇದ್ದರು.