ಸುದ್ದಿಗಾರರೊಂದಿಗೆ ಸಮಾಲೋಚನೆ…

263

ಮಂಡ್ಯ/ಮಳವಳ್ಳಿ: ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಂ 1 ಸರ್ಕಾರ ವೆಂದರೆ ಅದು ಕರ್ನಾಟಕ ಸರ್ಕಾರ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಉಪಾಧ್ಯಕ್ಷ ಬಿ ಸೋಮಶೇಖರ್ ಆರೋಪಿಸಿದರು.ಮಳವಳ್ಳಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿವಗೆ ಮಾತನಾಡಿ, ಸರ್ಕಾರ ಅಭಿವೃದ್ಧಿಯಲ್ಲಿ 5 ಸ್ಥಾನಕ್ಕೆ ಕುಸಿದಿದ್ದು.ರಾಜ್ಯ ಸರ್ಕಾರ ದ ಆಡಳಿತ ಯಾವ ರೀತಿ ನಡೆಸುತ್ತಿದೆ.ಅರ್ಥಮಾಡಿಕೊಳ್ಳಬೇಕು ಅದಲ್ಲದೆ ಕೇಂದ್ರ ಸರ್ಕಾರ ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳದೆ ಹಣವನ್ನು ವಾಪಸ್ಸು ಕಳುಹಿಸುತ್ತಿದೆ. ಈಗಾಗಲೇ ರೈತರಿಗೆ 50 ಸಾವಿರ ರೂ ಸಾಲ ಮನ್ನ ಮಾಡುತ್ತೇನೆ ಎಂದು ಹೇಳಿದ್ದು ಇದುವರೆಗೂ ಯಾವ ರೈತನಿಗೂ ಒಂದು ರೂಪಾಯಿ ನೀಡಿಲ್ಲ. ಕೂಡಲೇ ಕಳೆದ 4 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬಂದ ಅನುದಾನವನ್ನು ಶ್ವೇತ ಪತ್ರವನ್ನು ಹೊರಡಿಸಲಿ ಎಂದು ಒತ್ತಾಯಿಸಿದರು. ಮುಖ್ಯಮಂತ್ರಿ ಹಾಗೂ ಅವರ ಸಹಪಾಠಿಗಳಿಗೆ ಮಾತಿನಲ್ಲಿ ಹಿಡಿತವಿಲ್ಲ, ಒಬ್ಬ ಪ್ರಧಾನಮಂತ್ರಿ ಯನ್ನು ಅವ್ಯಾಚ ಪದಗಳಿಂದ ನಿಂಧನೆ ಮಾಡಿದ್ದು ಸರಿಯಲ್ಲ ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಹಾಗೂ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ತಾಲ್ಲೂಕು ಅಧ್ಯಕ್ಷ ಶಿವಸ್ವಾಮಿ, ಉಪಾಧ್ಯಕ್ಷ ಶಿವಮೂರ್ತಿ, ಪ್ರದಾನ ಕಾರ್ಯದರ್ಶಿ ಅಶೋಕಕ್ಯಾತನಹಳ್ಳಿ , ಸಂದೇಶ ಇದ್ದರು.