ಹಂಪಿ ಉತ್ಸವಕ್ಕೆ ವೇದಿಕೆ ಸಜ್ಜು..

213

ಬಳ್ಳಾರಿ:ಹೊಸಪೇಟೆನ. ೩,೪ ಮತ್ತು ೫ ರಂದು ಮೂರು ದಿನಗಳ ಕಾಲನಡೆಯಲಿರುವ ಹಂಪಿ ಉತ್ಸವನ್ನು ಜನೋತ್ಸವವನ್ನಾಗಿಆಚರಿಸಲಾಗುತ್ತದೆ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು. ಹಂಪಿ ಉತ್ಸವಕ್ಕೆ ನಿರ್ಮಾಣವಾಗುವಂತಹ ವೇದಿಕೆಗಳು, ವಾಹನನಿಲುಗಡೆ ಸೇರಿದಂತೆ ಉತ್ಸವಕ್ಕೆ ಬರುವಂತಹ ಸಾರ್ವಜನಿಕರಿಗೆಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತಹ ವಿವಿಧ ಸ್ಥಳಗಳನ್ನುಸೋಮವಾರ ಸಂಜೆ ಪರಿಶೀಲನೆ ನಡೆಸಿದ ನಂತರಸುದ್ಧಿಗಾರರೊಂದಿಗೆ ಅವರು ಮಾತನಾಡಿದರು. ಈ ವರ್ಷ ಹಂಪಿ ಉತ್ಸವದಲ್ಲಿ ದೇಶವಿದೇಶದ ಕಾಲಾವಿದರುಸೇರಿದಂತೆ ರಾಜ್ಯ ಮಟ್ಟದ ಕಲಾವಿದರು ಮತ್ತು ಸ್ಥಳೀಯಕಲಾವಿದರು ಸೇರಿದಂತೆ ದೇಶವಿದೇಶದ ಕಲಾವಿದರು ಸಹ ಹಂಪಿಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಇನ್ನೂ ೧೦ ದಿನಗಳ ಒಳಗಾಗಿಅಂದರೆ ಅಕ್ಟೋಬರ್ ೨೬ರ ಒಳಗಾಗಿ ಕಲಾವಿದರ ಆಯ್ಕೆನಡೆಯಲಿದೆ ಎಂದು ಅವರು ಹೇಳಿದರು.ಈ ವರ್ಷದ ಹಂಪಿ ಉತ್ಸವದಲ್ಲಿ ೯ ವೇದಿಕೆಗಳನ್ನುನಿರ್ಮಿಸಲಾಗುತ್ತಿದೆ. ಆದರೆ ಕಳೆದ ಬಾರಿ ವಿಜಯವಿಠಲದೇವಸ್ಥಾನದ ಬಳಿ ನಿರ್ಮಿಸಿರುವ ವೇದಿಕೆಯನ್ನು ಸ್ಥಳಬದಾಯಿಸಲು ಸ್ಥಳ ವೀಕ್ಷಣೆ ನಡೆಸಲಾಗುತ್ತಿದೆ. ಸೂಕ್ತ ಸ್ಥಳ ಸಿಕ್ಕರೆಆ ಪ್ರದೇಶದಲ್ಲಿ ವೇದಿಕೆಯನ್ನು ನಿರ್ಮಿಸಲಾಗುತ್ತದೆ ಇಲ್ಲವಾದಲ್ಲಿ೮ ವೇದಿಕೆಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರುವಿವರಿಸಿದರು. 

ಕಳೆದ ಬಾರಿ ಹಂಪಿ ಉತ್ಸವದಲ್ಲಿ ನಿರೀಕ್ಷೆಗೂ ಮೀರು ಜನರುಉತ್ಸವದಲ್ಲಿ ಭಾಗವಹಿಸಿದ್ದರು. ಈ ವರ್ಷ ಸಹ ಸಾಕಷ್ಟು ಜನರುಹಂಪಿ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಉತ್ಸವಕ್ಕೆ ಬರುವಜನರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಉಂಟಾಗದಂತೆಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಉತ್ಸವಕ್ಕೆ ಬರುವ ಜನರಿಗೆವಾಹನಗಳ ಪಾರ್ಕಿಂಗ್ ವ್ಯವಸ್ಥೆಗಾಗಿ ಸುಮಾರು ೪-೫ ಪ್ರದೇಶದಲ್ಲಿವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪಾರ್ಕಿಂಗ್ವ್ಯವಸ್ಥೆ ಸುಗಮವಾಗಿರಲು ಸಕಲ ಸಿದ್ದತೆಗಳನ್ನುಕೈಗೊಳ್ಳಲಾಗುತ್ತಿದೆ. ಯಾವ ಯಾವ ಪ್ರದೇಶದಲ್ಲಿ ಯಾವ ಯಾವವಾಹನಗಳನ್ನು ನಿಲ್ಲಿಸಬೇಕು ಎನ್ನುವ ಕುರಿತು ಅಧಿಕಾರಿಗಳುಸ್ಥಳಗಳನ್ನು ಪರಿಶೀಲನೆ ನಡೆಸಿ, ಪಾರ್ಕಿಂಗ್ ವ್ಯವಸ್ಥೆಗೆ ಸಿದ್ದತೆಗಳನ್ನುಕೈಗೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು. ಜಿಲ್ಲಾ ಪಂಚಾಯಿತಿ ಇಸಿಓ ಕೆ.ವಿ. ರಾಜೇಂದ್ರ, ಎಸ್ಪಿ ಆರ್.ಚೇತನ್, ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಮಿಶ್ರಾ,ತಹಸೀಲ್ದಾರ್ ಎಚ್. ವಿಶ್ವನಾಥ, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯಪ್ರವೀಣ್ ಸಿಂಗ್, ಸ್ಥಳೀಯ ಮುಖಂಡರಾದ ಕೆ. ಎಂ. ಹಾಲಪ್ಪ,ಎಲ್. ಸಿದ್ದನಗೌಡ, ಗುಜ್ಜಲ್ ರಘು, ಎಚ್. ಎನ್. ಎಫ್. ಮಹ್ಮದ್ಇಮಾಮ್ ನಿಯಾಜಿ, ಶ್ಯಾಮ್ ಸಿಂಗ್, ಕುರಿ ಶಿವಮೂರ್ತಿ, ಗರಗಪ್ರಕಾಶ್, ಪಾಲಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ತಾ.ಪಂ. ಕಾರ್ಯನಿರ್ವಾಹಕ ಅಽಕಾರಿ ಟಿ.ವೆಂಕೋಬಪ್ಪ, ಲೋಕೋಪಯೋಗಿ ಇಲಾಖೆಯ ಅಽಕಾರಿಕಿಶೋರ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.