ಕೈ ಕಾರ್ಯಕರ್ತರೇ ಕಾಂಗ್ರೆಸ್ ಕಾನೂನು ಇದೆ ನೋಡಿ..!

217

ಬಳ್ಳಾರಿ/ಬಳ್ಳಾರಿ:ಕಾಂಗ್ರೆಸ್ ನಲ್ಲಿ ನಿಷ್ಠಾವಂತರಿಗಿಲ್ಲ ಬೆಲೆ !ಆಪರೇಷನ್ ಕಮಲಕ್ಕೆ ಒಳಗಾದವರಿಗೆ ಅಧ್ಯಕ್ಷ ಸ್ಥಾನ ! ಪಕ್ಷದ ಪಾಥಮಿಕ ಸದಸ್ಯತ್ವ ಇಲ್ಲದವರಿಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ! ಕಾಂಗ್ರೆಸ್ ಭವನ ಕಟ್ಟಲು ಹಣ ಕೊಡಲು ಮುಂದಾದವರಿಗೆ ಸಿಕ್ತು ಸ್ಥಾನ ! ಕಾಂಗ್ರೆಸ್ ಪಕ್ಷದಲ್ಲಿ ಕಷ್ಟಪಟ್ಟು ಪಕ್ಷ ಕಟ್ಟಿದವರಿಗೆ, ನಿಷ್ಟಾವಂತ ಕಾರ್ಯಕರ್ತರಿಗೆ ಬೆಲೆ ಇಲ್ವವೇ ! ಹೌದು, ಕೈ ಕಾರ್ಯಕರ್ತರಿಗೆ ಇದೊಂದು ಶಾಕಿಂಗ್ ನ್ಯೂಸ ಆದ್ರೂ ಸತ್ಯ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದವರಿಗೆ ಸಿಗುತ್ತೆ ನೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಅಷ್ಟೆ ಅಲ್ಲ ಆಪರೇಷನ್ ಕಮಲಕ್ಕೆ ಒಳಗಾದ ಮೊದಲ ವ್ಯಕ್ತಿಗೆ ಮರಳಿ ಅಧ್ಯಕ್ಷ ಸ್ಥಾನ ನೀಡಿ ಕಾಂಗ್ರೆಸ್ ಹೈಕಮಾಂಡ ಇದೀಗ ಮುಜಗರಕ್ಕೆ ಒಳಗಾದ ಸ್ಟೋರಿ ನೋಡಿ ಇದೂ. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಗೆ ನಿನ್ನೆಯಷ್ಠೆ ನೀತನ ಅಧ್ಯಕ್ಷರಾಗಿ ರಪೀಕ ಎನ್ನುವವರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದ ನೂತನ ಬಳ್ಳಾರಿ ಜಿಲ್ಲಾಧ್ಯಕ್ಷ ರಪೀಕ್ ೨೦೦೫ ರಲ್ಲಿ ರೆಡ್ಡಿಗಳಿಂದ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರು, ಒಂದೂವರೆ ಕೋಟಿ ರೂಪಾಯಿ ಪಡೆದು ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮೊದಲ ವ್ಯಕ್ತಿಯನ್ನೆ ಇದೀಗ ಮರಳಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್

ಅಧ್ಯಕ್ಷರನ್ನಾಗಿ ಮಾಡಿರುವುದು ಪ್ರಾಮಾಣಿಕ ಕಾರ್ಯಕರ್ತರಿಗೆ ಮುಜುಗರವನ್ನುಂಟು ಮಾಡಿದೆ, ಅಲ್ಲದೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲದವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಕಾಂಗ್ರೆಸ್ ಭವನ ನಿರ್ಮಿಸಿಕೊಡಲು ಒಂದೂವರೆ ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಭರವಸೆ ನೀಡಿದಕ್ಕೆ ಅಧ್ಯಕ್ಷಗಿರಿ ಮಾರಾಟ ಮಾಡಲಾಗಿದೆ ಎಂದು ಕೈ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ, ಅಲ್ಲದೇ ಈ ಹಿಂದೆ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಸಹ ಬಿಎಸ್ಆರ್ ನಿಂದ ಬಂದವರಿಗೆ ನೀಡಿರುವುದರಿಂದ
ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆಯಿಲ್ಲವೇ ಎನ್ನುವಂತಾಗಿದೆ,