ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು

591

ಚಿಕ್ಕಬಳ್ಳಾಪುರ /ಶಿಡ್ಲಘಟ್ಟ : ನಗರದ ಎಲ್ಲಮ್ಮ ದೇವಾಲಯ ಮುಂಭಾಗ (ದೊಡ್ಡ ಬೇಕರಿ) ನ್ಯೂ ಡಿಲಕ್ಸ್ ಒವನ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೃತಪಟ್ಟಿರುವ ಘಟನೆ ನೆಡೆದಿದೆ.

ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣು.ಹಾಳೆಯಲ್ಲಿ ಅರ್ಧಕ್ಕೆ ಹರಿದ ಸ್ಥಿತಿಯಲ್ಲಿ ಡೆತ್ ನೋಟಿರುವುದು ಅನುಮಾನಕ್ಕೆ ಆಸ್ಪದವಾಗಿದೆ

ಸ್ವಾಮಿ ಅಲಿಯಾಸ್ ಆನಂದ್ ಸುಮಾರು 25 ವರ್ಷ ವಯಸ್ಸಿನ ಯುವಕ ಮೃತ ಪಟ್ಟಿರುವ ರ್ದುದೈವಿ ಬೇಕರಿ ಪಕ್ಕದಲ್ಲಿ ಇದ್ದ ಮನೆಯ ರೂಮಿನಲ್ಲಿ ಐರನ್ ಬಾಕ್ಸ್ ವೈಯರ್ ನಿಂದ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾಪನ್ನಾಪ್ಪಿದ್ದಾನೆ

ನತದೃಷ್ಟ ಯುವಕ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಚೌಳೇನಹಳ್ಳಿ ಗ್ರಾಮದ ರಂಗೇಗೌಡನ ಮಗನಾಗಿದ್ದು,ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯ ಪುರ ಮಯೂರ ಬೇಕರಿಯಲ್ಲಿ ಸುಮಾರು 7 ವರ್ಷಗಳು ಕೆಲಸ ಮಾಡಿದ್ದು ಅಲ್ಲಿ ಕೆಲಸ ಬಿಟ್ಟು ಇತ್ತೀಚಗೆ

ಶಿಡ್ಲಘಟ್ಟ ನಗರದ ನ್ಯೂ ಡಿಲಕ್ಸ್ ಓಒನ್ ಬೇಕರಿಗೆ ಸುಮಾರು 15 ದಿನಗಳಿಂದೀಚೆ ಕೆಲಸಕ್ಕೆ ಸೇರಿದ್ದು ಈ ಹಿಂದೆ ಕೆಲಸ ಮಾಡುತ್ತಿದ್ದ ವಿಜಯಪುರದ ಮಯೂರ ಬೇಕರಿಗೆ ಬಾನುವಾರ ಹೋಗಿದ್ದು ಅಲ್ಲಿನ ಯುವಕರು ಹಾಗೂ ಮೃತ ಸ್ವಾಮಿ ಅಲಿಯಾಸ್ ಆನಂದ್ ಗೂ ಗಲಾಟೆ ನಡೆದಿದೆ ಎಂದು ಈ ವಿಚಾರ ಮೃತನಾದ ನನ್ನ ಮಗ ದೂರವಾಣಿ ಮೂಲಕ ತಿಳಿಸಿದ ಎಂದು ಮೃತನ ತಂದೆ ರಂಗೇಗೌಡ ತಿಳಿಸಿದರು

ಈ ವಿಚಾರವಾಗಿ ಮನನೊಂದ ಯುವಕ ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗಿನ ಜಾವ ಶಿಡ್ಲಘಟ್ಟದಲ್ಲಿ ಬೇಕರಿ ಪಕ್ಕದಲ್ಲಿ ವಾಸವಿದ್ದ ಮನೆಯ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತ ತಾನು ಬರೆದ ಡೆತ್ ನೋಟ್ ಮಾಹಿತಿಯಿಂದ ಆತ್ಮಹತ್ಯೆ ಘಟನೆ ಬಗ್ಗೆ ಪೋಲಿಸರು ತಿಳಿಸಿರುತ್ತಾರೆ

ಇನ್ನು ಇದರ ಬಗ್ಗೆ ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾ ಸತ್ಯತೆ ಹೊರಬೀಳಬೇಕಾಗಿದೆ