ಸರ್ಕಾರಿ ಆಸ್ವತ್ರೆ ಕರ್ಮಕಾಂಡಗಳಿಗೆ ಶಾಸಕರೇ ಕಾರಣನಾ?

345

ಮಂಡ್ಯ/ಮಳವಳ್ಳಿ: ಸರ್ಕಾರಿ ಆಸ್ಪತ್ರೆಗಳ ಕರ್ಮ ಕಾಂಡಗಳಿಗೆ ಶಾಸಕ ಪಿ.ಎಂ ನರೇಂದ್ರ ಸ್ವಾಮಿರವರೇ ನೇರ ಕಾರಣ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದ್ದಾರೆ

ಮಳವಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿ ಯಲ್ಲಿ ಸುದ್ದಿಗೋಷ್ಟಿ ಮಾಡಿ ಮಾತನಾಡಿ, ಆಸ್ವತ್ರೆ ಉದ್ಘಾಟನೆ ಯಾಗಿ 6 ತಿಂಗಳಾದರೂ ಪ್ರಾರಂಭವಾಗಿಲ್ಲ ಬಗ್ಗೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಯುತ್ತದೆ. ಒಬ್ಬ ಗರ್ಭಣಿಯನ್ನು 50 ನಿಮಿಷಗಳ ಕಾಲ ವೈದ್ಯರಯಾಗಲಿ. ಸಿಬ್ಬಂದಿ ಗಳಾಗಲಿ , ಇಲ್ಲದಿರುವುದು ತಾಲ್ಲೂಕು ಆಡಳಿತ ವೈಖರಿ ಎಂದು ಆರೋಪಿಸಿದರು.

ನಾನು ಕ್ಷೇತ್ರ ದ ಅಭಿವೃದ್ಧಿ ಮಾಡುತ್ತೇನೆ. ಎನ್ನುತ್ತೀದ್ದಾರೆ ಅಭಿವೃದ್ಧಿ ಎಂದರೆ ಕೇವಲ ರಸ್ತೆಯಾಗಲಿ. ಕೆರೆ ಹೂಳೆತ್ತುವ ಮಾಡುವುದಲ್ಲ. ಕ್ಷೇತ್ರದ ಜನತೆಗೆ ಮೂಲಭೂತ ಸೌಕರ್ಯ ಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿ ಮಾಡಲಿ ಎಂದು ಶಾಸಕರನ್ನು ಒತ್ತಾಯಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಪುರಸಭಾದ್ಯಕ್ಷ. ದೊಡ್ಡಯ್ಯ, ನಂದಕುಮಾರ , ಕಂಬರಾಜು, ವಡ್ಡರಹಳ್ಳಿಸಿದ್ದರಾಜು ಸೇರಿದಂತೆ ಮತ್ತಿತರರು ಇದ್ದರು