ಪರ್ಯಟನೆ ಪರ್ವ:ಹಂಪಿಯಲ್ಲಿ ಪಾರಂಪರಿಕ ನಡಿಗೆ

253

ಬಳ್ಳಾರಿ/ಹೊಸಪೇಟೆ:ಹಂಪಿ ಉತ್ಸವ-2017 ಅಂಗವಾಗಿ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಪಾರಂಪರಿಕೆ ನಡಿಗೆ ಮೂಲಕ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಯಿತು.ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ, ಸಂಸ್ಕೃತಿ ಮಂತ್ರಾಲಯ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ವತಿಯಿಂದ ಪರ್ಯಟನ ಪರ್ವ ಕಾರ್ಯಕ್ರಮದ ನಿಮಿತ್ತವಾಗಿ ಪಾರಂಪರಿಕೆ ನಡಿಗೆ ಹಮ್ಮಿಕೊಳ್ಳಲಾಗಿತ್ತು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮೋತಿಲಾಲ್ ಲಮಾಣಿ, ಪ್ರಸಿದ್ಧ ಉಗ್ರನರಸಿಂಹ ದೇವಾಲದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಗ್ರನರಸಿಂಹ ದೇವಸ್ಥಾನ-ಬಡವಿಲಿಂಗ- ಕೃಷ್ಣ ದೇವಸ್ಥಾನ – ಸಾಸಿವೆಕಾಳು ಗಣೇಶ, ಹೇಮಕೂಟ ಪರ್ವತ, ಶ್ರೀ ವಿರುಪಾಕ್ಷ ಬಜಾರ್, ಎದುರು ಬಸವಣ್ಣ ಮಂಟಪದ ವರಗೆ ಪಾದಯಾತ್ರೆ ನಡೆಸಿದರು. ಹಳೆ ಛಾಯಾಚಿತ್ರ ಪ್ರದರ್ಶನ ಹಾಗೂ ಕಾರ್ಯಕ್ರಮ ಅನಾವರಣ ಹಾಗೂ ಇಲುಮಿನಷನ್ ಆಫ್ ಲೈಟ್ಸ್ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿವಿಧ ಇಲಾಖೆ ಹಾಗೂ ಅರೆಂಜ್ ಕೌಂಟಿ ರೆಸಾರ್ಟ್ ಹಂಪಿ. ಚಂದ್ರಕಲಾ ಭೂಮಿ, ಆನೆಗುಂದಿ, ಲಕ್ಷ್ಮೀ ಕಲಾಕ್ಷ್ರೇತ್ರ, ಸಹಯೋಗದಲ್ಲಿ ಕಾರ್ಯಕ್ರಮಗಳ ನಡೆದವು. ಸ್ಥಳೀಯ ಕರಕುಶಲ, ಕೈಮಗ್ಗ, ಸ್ಥಳೀಯ ಆಹಾರ ಪ್ರದರ್ಶನ ಇನ್ಟ್ಯಾಕ್ ಆನೆಗುಂದಿ, ಡಿ.ಸಿ.ಹೆಚ್. ಜವಳಿ ಮಂತ್ರಾಲಯ ಚೆನೈ, ಬೆಂಗಳೂರು ಪೂರ್ಣಿಮಾ ಹಾಗೂ ಇನ್ನಿತರರಿಂದ ಪ್ರವಾಸೋದ್ಯಮ ಮಳಿಗೆಗಳ ಪ್ರದರ್ಶನ ನಡೆಯಿತು. ಪ್ರವಾಸೋದ್ಯಮ ಮಂತ್ರಾಲಯದ ಸಹಾಯಕ ನಿರ್ದೇಶಕ ಎ.ಸೀತರಾಮನ್, ಭಾರತೀಯ ಸಮನ್ವಯ ಅಧಿಕಾರಿ ಯಮುನಾ ನಾಯ್ಕ, ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿ. ಪ್ರವಾಸಿ ಮಾರ್ಗದರ್ಶಕರು, ಸೇರಿದಂತೆ ಇತರರು ಭಾಗವಹಿಸಿದ್ದರು.