ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

256

ಮಂಡ್ಯ/ಮಳವಳ್ಳಿ: ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಮಿತಿ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ , ತಾಲ್ಲೂಕು ಸಾರ್ವಜನಿಕ ಆಸ್ವತ್ರೆ ಹಾಗೂ ಕಾನೂನು ಸೇವಾ ಸಮಿತಿ.ಮತ್ತು ವಕೀಲರಸಂಘ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮ ವನ್ನು ಹಿರಿಯ ಸಿವಿಲ್ ನ್ಯಾಯಾದೀಶ ವಿ.ಪ್ರಕಾಶ್ ಉದ್ಘಾಟಿಸಿ ಮಾತನಾಡಿ, ಕುಟುಂಬಗಳ ಗಲಾಟೆಗಳನ್ನು ನ್ಯಾಯಾಲಯಕ್ಕೆ ಬಂದರೆ ಅದನ್ನು ಮುಂದು ವರೆಯುವುದಕ್ಕೆ ಬಿಡದೆ ರಾಜಿ ಮೂಲಕ ಬಗೆಹರಿಸಿಕೊಳ್ಳಿ ಎಂದು ತಿಳಿಸಿದರು. ಮಾನಸಿಕರೋಗಿಗಳು ಅಪರಾಧ ಮಾಡಿದರೆ ಅವರಿಗೂ ಶಿಕ್ಷೆ ಖಚಿತ ಮೊದಲು ಮಾನಸಿಕವಾಗಿ ಗುಣಮುಖರಾಗಲು ಚಿಕಿತ್ಸೆ ನೀಡಿ ನಂತರ ಶಿಕ್ಷೆ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ, ಸರ್ಕಾರಿ ಸಹಾಯಕ ಅಭಿಯೋಜಕಿ ಅನುಪಮ, ಸಾರ್ವಜನಿಕಆಸ್ವತ್ರೆ ಆಢಳಿತಾಧಿಕಾರಿ ಮಹದೇವ ನಾಯಕ, ವಕೀಲರ ಸಂಘದ ಅಧ್ಯಕ್ಷ ಹೇಮಂತ, ರಾಜೇಂದ್ರ ಸೇರಿದಂತೆ ಮತ್ತಿತ್ತರರು ಇದ್ದರು