ಸೆಲ್ಫಿ ಹುಚ್ಚಿಗೆ ಯುವಕ ಬಲಿ..?

2259

ಚಿಕ್ಕಬಳ್ಳಾಪುರ/ಚಿಂತಾಮಣಿ: ಬಾಡೂಟ ಸವಿಯಲು ಬಂದ ಯುವಕ ನೀರಿನಲ್ಲಿ ಮುಳುಗಿ ಸಾವು. ಚಿಂತಾಮಣಿ ಹೊರವಲಯದ ಕನ್ನಂಪಲ್ಲಿ ಕೆರೆಯ ಬಳಿ ಘಟನೆ.ಓರ್ವ ಯುವಕ ನೀರಿನಲ್ಲಿ ಮುಳುಗಿ ಸಾವು, ಮತ್ತೋರ್ವ ಪ್ರಾಣಾಪಾಯ ದಿಂದ ಪಾರು.

ಘಟನೆಯ ವಿವರ: ಇತ್ತೀಚೆಗೆ ತುಂಬಿದ ಕೆರೆಗೆ ಬಾಗಿನ ಅರ್ಪಿಸಿದ್ದ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಸಂಭ್ರಮಾಚರಣೆ ಆಚರಿಸಲು ಕ್ಷೇತ್ರದ ಜನತೆಗೆ ವನಭೋಜನ(ಬಾಡೂಟ)ದ ಔತನಕೂಟಕ್ಕೆ ಕರೆದಿದ್ದರು ಎನ್ನಲಾಗಿದ್ದು, ವನಭೋಜನಕ್ಕೆ ಬಂದಿದ್ದ ಕೆಲವು ಯುವಕರು ಕೆರೆಯಲ್ಲಿ ಈಜಿ ಸಂಭ್ರಮಿಸಲು ಮುಂದಾಗಿದ್ದು, ಇನ್ನೂ ಕೆಲವರು ಮೊಬೈಲ್ ಕೈಲಿ ಹಿಡಿದು ಸೆಲ್ಫಿ ತೆಗೆದು ಮೈಮರೆತು ಕುಷಿಪಟ್ಟು ಸಂಭ್ರಮ ಅತಿರೇಕಕ್ಕೆ ಹೋಗಿ ಯುವಕರು ನೀರಿಗೆ ಬಿದ್ದು ಮುಳುಗಿದ್ದಾರೆ. ಅದೃಷ್ಟವಶಾತ್ ಒಬ್ಬ ಯುವಕ ಬದುಕಿ ಉಳಿದಿದ್ದು..ನತದೃಷ್ಟ ಸುನೀಲ್ (22) ವರ್ಷ ಯುವಕ ಮೃತಪಟ್ಟಿದ್ದಾನೆ ಎನ್ನಲಾಗಿದ್ದು ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.