ಬಸ್ಸಿಗಾಗಿ ಪ್ರಯಾಣಿಕರ ಪರದಾಟ…

681

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ ನಿಗಧಿತ ಸಮಯಕ್ಕಿಂತ ಮುಂಚಿತವಾಗಿ ತೆರಳಿದ ಸರ್ಕಾರಿ ಬಸ್, ಗ್ರಾಮೀಣ ಭಾಗದ ಹಳ್ಳಿಗಳಿಗೆ ತೆರಳಲು ಪ್ರಯಾಣಿಕರು ಸಂಜೆ ವೇಳೆ ಪರದಾಟ. ಸಂಬಂಧಪಟ್ಟ ಟಿಸಿ ಯನ್ನು ಕೇಳಿದರೆ ಹಾರಿಕೆ ಉತ್ತರ.ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ತುಮ್ಮನಹಳ್ಳಿ ಕೈವಾರ ಮಾರ್ಗದ ಬಸ್ ಪ್ರತಿದಿನ ಸಂಜೆ 6-30 ಕ್ಕೆ ಹೊಗುತ್ತಿದ್ದು ಅರ್ಧ ಗಂಟೆ ಮುಂಚಿತವಾಗಿ ತೆರಳಿದ್ದರಿಂದ 8-30 ರ ಬಸ್ಸಿಗೆ ಕಾಯುವಂತ ದು:ಸ್ಥಿತಿ. ಗ್ರಾಮಾಂತರ ಪ್ರದೇಶ ಗಳಿಂದ ಬರುವ ಬಡ ಕೂಲಿ ಕಾರ್ಮಿಕರು ಬೆಳಗ್ಗೆ ಯಿಂದ ಸಂಜೆವರೆಗೂ ಮೈಮುರಿದು ದುಡಿದು ಮನೆ ತಲುಪಿ ಉಂಡು ಮಲಗುವ ಸಮಯಕ್ಕೂ ಸಂಚಕಾರ ಉಂಟುಮಾಡುವುದು ಎಷ್ಟು ಸರಿ? ಜನಸೇವಕಾರ ಹೆಸರಲ್ಲಿ ಕೈ ತುಂಬಾ ಸಂಬಳ ಪಡೆಯುವ ಸರ್ಕಾರಿ ನೌಕರರಿಗೆ ಬಡ ಕೂಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಕಾಳಜಿ ಬೇಡವೇ ಸ್ವಾಮಿ..?
ಇನ್ನಾದರೂ ಸಂಬಂಧ ಪಟ್ಟವರು ಸಮಸ್ಯೆ ಸರಿಪಡಿಸಿ. ಬಸ್ಸಿಗಾಗಿ ಜನ ಪರದಾಡುವಂತಾ ಸ್ಥತಿ ತಪ್ಪಿಸಿ. ಆಟೊಗಳ ಮೂಲಕ ರಾತ್ರಿ ವೇಳೆ ಯಲ್ಲಿ ಕೆಲವು ಪ್ರಯಾಣಿಕರು ನೂರಾರು ರೂಪಾಯಿಗಳಷ್ಟು ಹಣ ನೀಡಿ ಗ್ರಾಮಗಳಿಗೆ ತೆರಳುವಂತದ್ದನ್ನು ತಪ್ಪಿಸಿ.