ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆ

337

ಬಳ್ಳಾರಿ/ ಹೊಸಪೇಟೆ:ಹಂಪಿ ಉತ್ಸವದಲ್ಲಿ ನ.೨ ರಿಂದ ೯ರವರೆಗೆ ನಡೆಯಲಿರುವ ಕರ್ನಾಟಕ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯಿತು ೨೨೦ಕ್ಕೂ ಹೆಚ್ಚು ಕಲಾವಿದರು ಸಂದರ್ಶನಕ್ಕೆ ಹಾಜರಾಗಿದ್ದರು. ಇದರಲ್ಲಿ ೧೦೦ ಜನ ಸ್ಥಳೀಯ ಅನುಭವಿ ಮತ್ತು ನೃತ್ಯ ಕಲಾವಿದರನ್ನು ಆಯ್ಕೆ ಮಾಡಲಾಯಿತು.

ಆಯ್ಕೆ ಸಮಿತಿಯಲ್ಲಿ ವೇದಿಕೆ ವ್ಯವಸ್ಥಾಪಕರಾದ ಬೆಂಗಳೂರಿನ ಎಂ. ಮನೋಹರ್, ಮೈಸೂರು ವಿಶ್ವವಿದ್ಯಾಲಯದ ನೃತ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಶೀಲಾ ಶ್ರೀಧರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಡಾ. ಅಕ್ಕಮಹಾದೇವಿ ಮತ್ತು ಓಬಯ್ಯ, ಕ್ಷೇತ್ರ ಶಿಕ್ಷಣಾಽಕಾರಿ ಎಲ್. ಡಿ. ಜೋಶಿ ಸೇರಿದಂತೆ ಇತರರು ಆಯ್ಕೆಯಲ್ಲಿ ತೊಡಗಿಕೊಂಡಿದ್ದರು.
ಆಯ್ಕೆಯಾದ ಕಲಾವಿದರ ಪಟ್ಟಿಯನ್ನು ಅ.೨೫ ರಂದು ಸಂಜೆ ೫ಗಂಟೆಗೆ ಪ್ರಕಟಿಸಲಾಗುವುದು. ಆಯ್ಕೆಯಾದ ಕಲಾವಿದರ ಅಭ್ಯಾಸ ಪ್ರಕ್ರಿಯೆ ಮೂರು ದಿನಗಳ ಕಾಲ ಅ.೨೭ ರಿಂದ ಹೊಸಪೇಟೆಯ ಮುನ್ಸಿಪಲ್ ಕ್ರೀಡಾಂಗಣದ ಪಕ್ಕದಲ್ಲಿರುವ  ಪಿಬಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ನಂತರ ಉಳಿದ ನಾಲ್ಕು ದಿನಗಳ ಕಾಲ ಹಂಪಿಯ ಆನೆಲಾಯದ ವೇದಿಕೆಯಲ್ಲಿ ಅಭ್ಯಾಸ ನಡೆಸಲಾಗುವುದು ಎಂದು ಆಯ್ಕೆ ಸಮಿತಿಯಲ್ಲಿ ವೇದಿಕೆ ವ್ಯವಸ್ಥಾಪಕ ಬೆಂಗಳೂರಿನ ಎಂ. ಮೋಹರ್ ತಿಳಿಸಿದ್ದಾರೆ.