ಕಾಮಗಾರಿಗೆ ಗುದ್ದಲಿ ಪೂಜೆ..

471

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮುರುಗಮಲ್ಲ ಹೋಬಳಿಯಲ್ಲಿ ಎರಡು ಕಡೆ ಚೆಕ್ ಡ್ಯಾಂಗೆ ಭೂಮಿ ಪೂಜೆ. ಸಣ್ಣ ನೀರಾವರಿ ಇಲಾಖೆ ವತಿಯಿಂದ ಮುರುಗಮಲ್ಲ ಹೋಬಳಿಯ ಗುಡಾರ್ಲಹಳ್ಳಿ ಮತ್ತು ಗುಡಿಸಲಹಳ್ಳಿ ಗ್ರಾಮದ ಹತ್ತಿರ ಸುಮಾರು 90 ಲಕ್ಷ ರೂಪಾಯಿ ವೇಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಕೃಷ್ಣಾರೆಡ್ಡಿ ರವರು ನೆರವರಿಸಿ ಮಾತನಾಡಿ ಕಾಮಗಾರಿಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣ ಗೋಳಿಸಬೇಕು.ಗುಣಮಟ್ಟದಿಂದ ಕೆಲಸ ಕೋಡಿರಬೇಕೆಂದರು ಇತ್ತೀಚಿನ ದಿನಗಳಲ್ಲಿ ಮಳೆ ಚನ್ನಾಗಿ ಬಂದಿದೆ ಮಳೆ ನೀರನ್ನೂ ಒಂದು ಜಾಗದಲ್ಲಿ ಶೇಕರಣೆ ಆಗಬೇಕು ಮತ್ತು ಈ ಭಾಗದಲ್ಲಿ ಇರುವ ರೈತರು ಹಾಕಿರುವ ಬೊರ್ ವೇಲ್ ಗೆ ಉತ್ತಮ ನೀರನ್ನು ಬರಬೇಕೆಂದು ಉದ್ದೇಶದಿಂದ ಮಾಡಲಾಗಿದೆಯಂದರು.ಈ ಸಂಧರ್ಭದಲ್ಲಿ ತಾ ಪ ಸದಸ್ಯ ರಾಜಣ್ಣ.ಜೆಡಿಎಸ್ ತಾ ಉಪಾಧ್ಯಾಕ್ಷರಾದ ಬೈರಾ ರೆಡ್ಡಿ ನಗರ ಸಭಾ ಸದಸ್ಯರಾದ ಪ್ರಕಾಶ್ ಮುಖಂಡರಾದ ಮುರುಗಮಲ್ಲಾ ದೇವರಾಜ್ ಮತ್ತು ಗುತ್ತಿಗೆದಾರ ಸುಧಾಕರ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ತಿತರಿದ್ದರು.