ನಾಲ್ಕುಜನ ಮನೆಗಳ್ಳರ ಬಂಧನ..

331

ಬಳ್ಳಾರಿ/ ಹೊಸಪೇಟೆ: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು, ಶನಿವಾರ ಬಂಧಿಸಿ, 2.59 ಲಕ್ಷ ಮೌಲ್ಯದ ಚಿನ್ನ,ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ 18ನೇ ವಾರ್ಡು ಎಸ್.ಆರ್.ನಗರದ ನಿವಾಸಿಗಳಾದ ಯೂನೂಸ್ ಅಲಿಯಾಸ್ ನರೇಶ್ (21), ಮೆಹಬೂಬ್ ಅಲಿಯಾಸ್ ಕೊಂಡಚಿ(20), ನಿಶಾರ್ ಅಹಮ್ಮದ್ ಅಲಿಯಾಸ್ ನಿಶಾ (19) ಹಾಗೂ ರಾಜು ಅಲಿಯಾಸ್ ಫೀಲಿಂಗ್ ರಾಜು (23) ಬಂಧಿತರು.
ಕಳೆದ ಏಪ್ರಿಲ್ ತಿಂಗಳಲ್ಲಿ ಎಸ್.ಆರ್.ನಗರದ ವಾಸಿ ಶಾಂತ ಮೂರ್ತಿ ಎನ್ನುವವರ ಮನೆಯಲ್ಲಿ ಯಾರು ಇಲ್ಲದ ಸಮಯ ಕಾದು ಮನೆಯ ಬೀಗ ಮುರಿದು ಮನೆಯಲ್ಲಿದ್ದ 85ಗ್ರಾಮ ಚಿನ್ನ ಹಾಗೂ 250 ಬೆಳ್ಳಿ ಆಭರಣ ನಗದು ಸೇರಿ ದೋಚಿ ಪರಾರಿಯಾಗಿದ್ದರು.
ಇದಲ್ಲದೇ ಕಳೆದ ಆಗಷ್ಟು ತಿಂಗಳಲ್ಲಿ ಆಕಾಶವಾಣಿ ಪ್ರದೇಶದಲ್ಲಿ ಕ್ರಿಸ್ಟಿನಾ ಪಾರ್ಥಸ್ಯಾಮಿವೇಲ್ ಎಂಬುವವರ ಮನೆಯ ಕಿಟಿಯ ಕಬ್ಬಿಣದ ಸರಳು ಮುರಿದು ಸುಮಾರು 3.5ಗ್ರಾಮ ಚಿನ್ನದ ಓಲೆ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಎರಡು ಪ್ರಕರಣಗಳಲ್ಲಿ ಈ ನಾಲ್ವರು ಆರೋಪಿಗಳನ್ನು ಬಂಧಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪೊಲೀಸ್ ಠಾಣೆ ಸಿಪಿಐ ಎನ್.ಲಿಂಗನ ಗೌಡ ರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತಿದ್ದು ನಾವು ಎಷ್ಟು ಬಾರಿ ಜನರಿಗೆ ಜಾಗೃತಿ ಮೂಡಿಸಿದರೂ ಜನರ ಅಜಾಗರೂಕತೆ ಯಿಂದ ಇಂಥ ಖದೀಮರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಆದುದರಿಂದ ಇನ್ನು ಮುಂದೆ ತಾವು ಯಾವುದಾದರೂ ಊರಿಗೆ ಹೋಗುವ ಮುನ್ನ ತಮ್ಮ ಸಂಬಂಧಿಕರ ಕೈಯಲ್ಲಿ ಅಥವಾ ತಮ್ಮ ಮನೆಯ ಅಕ್ಕಪಕ್ಕದ ಪರಿಚಯಸ್ಥರ ಕೈಯಲ್ಲಿ ತಮ್ಮ ಹಣ ಮತ್ತು ಆಭರಣಗಳನ್ನು ಕೊಟ್ಟು ನಾವು ಬರುವವರೆಗೆ ಜಾಗರೂಕತೆಯಿಂದ ನೋಡಿಕೊಳ್ಳಿ ಎಂದು ಹೇಳಿ ಹೋಗುವುದು ಉತ್ತಮ ಎಂದು ಹೇಳಿದರು ….