ಟಿಪ್ಪು ಜಯಂತಿಗೆ ಮುತಾಲಿಕ್ ವಿರೋಧ..!?

675

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಮುರುಗಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಅಖಿಲ ಭಾರತ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ವತಿಯಿಂದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಹೋಗುವ ಸಂದರ್ಭದಲ್ಲಿ ನಗರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಸುಮಾರು ಹದಿನೈದು ವರ್ಷಗಳಿಂದ ದತ್ತ ಮಾಲ ಅಭಿಯಾನ ಚಿಕ್ಕಮಂಗಳೂರಿನ ದತ್ತಾತರೆಯ ಪೀಠೆಯಲ್ಲಿ ನವೆಂಬರ್ 19 ಗೆ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಈ ಕಾರ್ಯಕ್ರಮದಲ್ಲಿ ಸುಮಾರು 5000 ಸಾವಿರ ಜನ ಸೇರುತ್ತಾರೆ. ಈ ಬಾರಿ ನಿರ್ಣಾಯಕ ದತ್ತ ಮಾಲ ಮಾಡಲಾಗುತ್ತದೆ ಈ ಕಾರ್ಯಕ್ರಮದಲ್ಲಿ ವಾರಣಾಸಿಯಿಂದ ಸಮಾರು 50 ನಾಗ ಸಾಧ ಮತ್ತು ಕರ್ನಾಟಕದಿಂದ10 ಸಾಧುಗಳು ಭಾಗವಹಿಸಲಿದ್ದಾರೆ . ದತ್ತಾತರೆಯ ಪೀಠದಿಂದ 7 ಕಿ ಮೀ ದೂರದಲ್ಲಿ ನಾಗೆನ್ ಹಳ್ಳಿ ಹತ್ತಿರ ಬಾಬಾ ಬುಡೆನ್ ಗಿರಿ ದರ್ಗಾಯಿದೆ ಅಲ್ಲಿನೊ ಸಹ ಉರುಸ್ ಮಾಡಲಾಗುತ್ತದೆ ಅದಕ್ಕಾಗಿ ದತ್ತಾತರೆಯ ಪೀಠೆ ಹಿಂದುಗಳಿಗೆ ಮಾಡಿ ಮತ್ತು ಬಾಬಾ ಬುಡೆನ್ ಗಿರಿಯ ಜಾಗವನ್ನು ಮುಸ್ಲಿಮರಿಗೆ ಸೌಲಭ್ಯ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ . 

ವಿಧಾನ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರ ಪತಿ ಮಾತನಾಡಿ ಟಿಪ್ಪುಸುಲ್ತಾನ್ ರವರು ಒಬ್ಬ ಸೈನಿಕ ಎಂದು ಭಾಷಣದಲ್ಲಿ ಹೇಳಿದರು ಅದಕ್ಕೆ ನಾವು ಖಂಡಿಸಿತ್ತಿವಿ ಹಾಗು ವಿರೋಧಿಸುತ್ತಿವಿ
ಟಿಪ್ಪು ಒಂದು ದೇಶ ದ್ರೂಹಿ.ಕನ್ನಡ ಮತ್ತು ಹಿಂದುಗಳ ದ್ರೋಹಿ ಎಂದರು.ಸರ್ಕಾರ ಇದನ್ನು ರಾಜಕೀಯ ವಾಗಿ ಉಪಯೋಗಿಸುಲು ಮುಂದಾಗಿದ್ದಾರೆ ಇವರು ಬೇಕಾದರೆ ಸರ್ ಮೀರ್ಜಾ ಇಸ್ಮಾಯಿಲ್ ಮತ್ತು ಅಬ್ದುಲ್ ಕಲಾಂ ರವರ ಜನ್ಮದಿನಚರಣೆಯನ್ನು ಆಚರಣೆ ಮಾಡಲಿ ಟಿಪ್ಪು ಜಯಂತಿ ಬೇಡಯಂದರು .
ನಾನು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸ್ಥಾನ ಕೋಟ್ಟರೆ ಸ್ಪರ್ಧೆ ಮಾಡಲು ತಯರಾಗಿದ್ದಿನಿ ಇಲ್ಲದಿದ್ದರೆ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ತಿರ್ಮಾನಿಸಿದಿನಿ .
ಈ ಸಂದರ್ಭದಲ್ಲಿ ರಾಜ ಕಾರ್ಯದರ್ಶಿ ನಾರಾಯಣಸ್ವಾಮಿ . ಕುರುಟಹಳ್ಳಿ ಮಂಜು . ಮಾಡಿಕೆರೆ ಅರುಣ್ ಸೇರಿದಂತೆ ಶ್ರೀ ರಾಮ ಸೇನೆಯ ಕಾರ್ಯಕರ್ತರು ಉಪಸ್ತಿತರಿದ್ದರು .