ಮೋಲ್ಡಿಂಗ್ ಕುಸಿದುಬಿದ್ದು, ಓರ್ವ ವ್ಯಕ್ತಿಗೆ ಗಾಯ..

205

ಬೆಂಗಳೂರು/ಕೆ ಆರ್ ಪುರ:ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಪಾರ್ಕಿಂಗ್ ಭಾಗದ ಮೋಲ್ಡಿಂಗ್ ಕುಸಿದುಬಿದ್ದಿದ್ದು, ಓರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ. ಬೆಂಗಳೂರಿನ ರಾಮಮೂರ್ತಿನಗರ ಸಮೀಪದ ಹೊರಮಾವು ಬಳಿಯ ಜಯಂತಿ ನಗರದಲ್ಲಿ ಘಟನೆ ನಡೆದಿದ್ದು, ಕೆ ಟು ಕೆ ಬಿಲ್ಡರ್ಸ್ ಗೆ ಸೇರಿದ ಅಪಾರ್ಟ್ಮೆಂಟ್ ಇದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೆ ಅಪಾರ್ಟ್ಮೆಂಟ್ ಕಟ್ಟಡ ಕಾಮಗಾರಿ ಮುಗಿದಿದ್ದು, ಅಪಾರ್ಟ್ಮೆಂಟ್ ನಾ ಪಾರ್ಕಿಂಗ್ ಲಾಟ್ ಗೆ ಇಂದು ಮೊಲ್ಡಿಂಗ್ ಹಾಕಲಾಗಿತ್ತು. ಈ ವೇಳೆ ಮೊಲ್ಡಿಂಗ್ ನ ಟೆಸ್ಟಿಂಗ್ ನಡೆಯಿತಿದ್ದ ಸಮಯದಲ್ಲಿ ಸೆಂಟ್ರಿಂಗ್ ಕುಸಿದು, ಕೆಲಸ ಮಾಡುತಿದ್ದ ಕಾರ್ಮಿಕ ರಿಯಾಜ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಗಾಯಳುವಿಗೆ ಹತ್ತಿರದ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು,
ರಾಮಮೂರ್ತಿ ನಗರ ಪೊಲೀಸರು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸುತ್ತಿದ್ದಾರೆ.