ಉಡುಪುಗಳ ವೃತ್ತಿ ಕೌಶಲ್ಯ ಹೊಲಿಗೆ ತರಬೇತಿ ಕಾರ್ಯಕ್ರಮ

334

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ ನಲ್ಲಿರುವ ಸ್ಪಂದನ ಗ್ರಾಮೀಣಾಭಿೃದ್ಧಿ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯದೊಂದಿಗೆ ಸ್ಥಿರ ಉಡುಪುಗಳ ವೃತ್ತಿ ಕೌಶಲ್ಯ ಹೊಲಿಗೆ ತರಬೇತಿ ಮುಕ್ತಾಯ ಕಾರ್ಯಕ್ರಮ ನಡೆಯಿತು.

ಕೈವಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೈಲಾವತಿ ಮಂಜುನಾಥ್ ಮಾತನಾಡಿ, ಇಂದಿನ ಯುಗದಲ್ಲಿ ಜನ ಸಾಮಾನ್ಯರ ಶೈಲಿ ಬದಲಾವಣೆ ಯಾಗುತಿದ್ದು , ನಾವು ಅದರಂತೆ ಬದಲಾಗಬೇಕಿದೆ. ಮಹಿಳೆಯರಿಗೆ ಸರ್ಕಾರ ನೀಡುವ ಕೌಶಲ್ಯ ತರಬೇತಿಗಳು ಅವರ ಜೀವನ ಮಟ್ಟ ಸುದಾರಿಸುತ್ತದೆ ಅಲ್ಲದೆ ಸ್ವಾವಂಬಿಗಳಾಗಿ ಜೀವನ ನೆಡೆಸಲು ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ಈ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತರಬೇತಿ ಶಿಕ್ಷಕಿ ಸರ್ವಮಂಗಳ ಮಾತನಾಡಿ ಸ್ಥಿರ ಉಡುಪುಗಳ ವೃತ್ತಿ ಕೌಶಲ್ಯ ತರಬೇತಿಯ ಮೊದಲನೇ ತಂಡದಲ್ಲಿ 25 ಮಂದಿ ಭಾಗವಹಿಸಿದ್ದು ,ಮಹಿಳೆಯರು ಶ್ರಮ ಪಟ್ಟು ಕಲಿತಿದ್ದು ಇದನ್ನು ಇಷ್ಟಕ್ಕೆ ಸೀಮಿತಗೊಳಿಸದೆ ನಿಮ್ಮ ಜೀವನಕ್ಕೆ ಪ್ರೇರಣೆ ಯಾಗಬೇಕು , ತಮ್ಮ ಮನೆಯಲ್ಲಿ ಹೊಲಿಗೆ ತರಬೇತಿ ಯಂತ್ರವನ್ನು ಇಟ್ಕೊಂಡು ಬಿಡುವಿನ ವೇಳೆಯಲ್ಲಿ ನಿಮ್ಮ ಬಟ್ಟೆಗಳನ್ನು ನೀವೇ ಹೊಳೆದುಕೊಳ್ಳಬಹುದು .
ತರಬೇತಿಯಲ್ಲಿ ಯಾವುದೇ ಸಂಶಯ ಇದ್ದಲ್ಲಿ ಮತ್ತೆ ಹೇಳಿಕೊಡಲು ನಾವು ಸಿದ್ದವಿದ್ದೇವೆ ಎಂದು ಹೇಳಿದರು.

ಈಗಾಗಲೇ ಒಂದನೇ ತಂಡದ ತರಬೇತಿ ನೀಡಿದ್ದು ಮುಕ್ತಾಯವಾಗಿದೆ. ಎರಡನೇ ತಂಡಕ್ಕೆ ಅರ್ಜಿಗಳನ್ನು ಆಹ್ವಾನಿಸುತಿದ್ದು ಆಸಕ್ತಿ ಇರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಜನಾಂಗದ ತರಬೇತಿಯನ್ನು ಪ್ರಾರಂಬಿಸಲಾಗಿದೆ. ತರಬೇತಿ ಅವಧಿ 45 ದಿನಗಳ ಕಾಲ ನೆದೆಸಲಿದ್ದು ಗೌರವ ಧನವಾಗಿ 300 ರೂಗಳನ್ನು ನೀಡಲಾಗುವುದು ಎಂದು ಕೈವಾರ ಕ್ರಾಸ್ ಸ್ಪಂದನ ಗ್ರಾಮೀಣ ಅಭಿೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಬನಹಳ್ಳಿ ರವೀಂದ್ರಗೌಡ ರವರು ತಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಸಿಡಿಪಿಓ ನಾನಮ್ಮ ,ರೈತ ಸಂಘದ ಕಾರ್ಯದರ್ಶಿ ಶೆಟ್ಟಹಳ್ಳಿ ವೆಂಕಟರೆಡ್ಡಿ, ಅಂಗನವಾಡಿ ಕಾರ್ಯಕರ್ತೆ ಪದ್ಮಮ್ಮ , ತರಬೇತಿ ಶಿಕ್ಷಕಿ ಸುನಂದಮ್ಮ, ತರಬೇತಿದಾರರಾದ ಬಿಂದು, ಕಾವ್ಯ, ಅರ್ಪಿತಾ, ನಂದಿನಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.