ಹೃದಯಾಘಾತದಿಂದ ಆರೋಪಿ ಸಾವು..!?

448

ಬಳ್ಳಾರಿ/ಬಳ್ಳಾರಿ:ಅಕ್ರಮ ಮರಳು ದಂದೆ ಮಾಡಿದ್ದು ಅಣ್ಣ.ಪೊಲೀಸರು ಬಂಧಿಸಿದ್ದೂ ತಮ್ಮನನ್ನ ! ಹೃದಯಾಘಾತದಿಂದ ಆರೋಪಿ ಸಾವು- ಸಂಭದಿಕರಿಂದ ರಂಪಾರಾಮಾಟ.ಅಕ್ರಮ‌ ಮರಳು ದಂಧೆ ಮಾಡುತ್ತಿದ್ದಿದ್ದು ಅಣ್ಣ. ಆದ್ರೆ ಪೊಲೀಸರು ಬಂಧಿಸಿದ್ದು ಮಾತ್ರ ತಮ್ಮನನ್ನ. ಹೀಗಾಗಿ ಕಿರುಕುಳಕ್ಕೆ ಒಳಗಾದ ಆರೋಪಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ, ಬಳ್ಳಾರಿಯ ಕೌಲಬಜಾರನ ಖಾದರಭಾಷಾ ಮರಳು ದಂದೆ ಮಾಡುತ್ತಿದ್ದ, ಹೀಗಾಗಿ ಡಿಸಿಆರ್ ಬಿ ಪೊಲೀಸರು ಕಳೆದ ಗುರುವಾರ ಖಾದರಭಾಷಾ ಸೇರಿದಂತೆ ಆರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ವೇಳೆ ಆರೋಪಿ ಖಾದರ ಸಹೋದರ ನಿಸಾರ ಅಹ್ಮದನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದ್ರೆ ಪೊಲೀಸರ ಕಿರುಕುಳಕ್ಕೆ ಒಳಗಾದ ಆರೋಪಿ ನಿಸಾರ ಅಹ್ಮದ್ ನಿಗೆ ಇಂದು ಎದೆನೋವು ಕಾಣಿಸಕೊಂಡ ಪರಿಣಾಮ ಜೈಲು ಸಿಬ್ಬಂದಿ ಆರೋಪಿ ನಿಸಾರನನ್ನು ವಿಮ್ಸ್ ದಾಖಲು ಮಾಡಿದ ಬೆನ್ನಲ್ಲೆ ನಿಸಾರ ತ್ರೀವ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ನಿಸಾರನ ಸಾವಿಗೆ ಪೊಲೀಸರೇ ಕಾರಣವೆಂದು ಆರೋಪಿಸಿ ಸಂಭದಿಕರು ಆಸ್ಪತ್ರೆಯಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿದರು. ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿ ರಂಪಾರಾಮಾಟ ಮಾಡಿದ್ರೂ, ಸ್ಥಳಕ್ಕೆ ಎಸ್ ಪಿ ಆರ್ ಚೇತನ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ರೂ ಸಂಭದಿಕರು ಮಾತ್ರ ಎಸ್ ಪಿ ಚೇತನಗೆ ಘೇರಾವ ಹಾಕಿ ಗದ್ದಲ ಮಾಡಿದ್ರೂ, ಹೀಗಾಗಿ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರ ಅಧಿಕಾರಿಗಳ ಹರಸಾಹಸ ಮಾಡಬೇಕಾಯ್ತು, ಈ ವೇಳೆ ಮಾತನಾಡಿದ ಎಸ್ ಪಿ ಆರ್ ಚೇತನ 

ಆರೋಪಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ,
ಈ ಕುರಿತು ಪ್ರಕರಣದ ಬಗ್ಗೆ ಡಿವೈಎಸ್ಪಿ ಹಾಗೂ ನ್ಯಾಯಾದೀಶರಿಂದ ತನಿಖೆ ನಡೆಸಲಾಗುವುದು,
ಪೊಲೀಸರ ವೈಫಲ್ಯ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ನಂತರ ಸಂಭದಿಕರು ಶವಪರೀಕ್ಷೆಗೆ ಅವಕಾಶ ನೀಡಿದ್ರೂ,