ಶಿವನ ಅಭಿಷೇಕಕ್ಕೆ ಕಾಶಿಯ ಜಲ

325

ಕೋಲಾರ/ಮಾಲೂರು: ತಾಲ್ಲೂಕಿನ ಮಾಸ್ತಿ ಹೋಬಳಿ ಯ ದಿನ್ನಹಳ್ಳಿ ಮಾರ್ಗದ ಬಳಿ ತೀರ್ಥ ಗಿರಿಶ್ವರ ದೇವಾಲಯದಲ್ಲಿ ಕಡೆ ಕಾರ್ತೀಕ ಸೋಮವಾರ ದ ಪ್ರಯುಕ್ತ ವಿಷೇಶ ಪೂಜಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಶಕಗಳ ಇತಿಹಾಸ ಹೊಂದಿರುವಂತಹ ಪುರಾತನ ದೇವಾಲಯ ಇದಾಗಿದ್ದು ದೇವಾಲಯದಲ್ಲಿ ವಿಶೇಷ ವೆಂಬಂತೆ ಇಲ್ಲಿ ದೇವರ ಅಭಿಷೇಕಕ್ಕಾಗೆ ಕಾಶಿ ಯಿಂದ ನೀರು ಬರುತ್ತದೆ ಎಂಬ ಪ್ರತೀತಿ ಭಕ್ತರಲ್ಲಿದೆ. ಇದಕ್ಕೆ ಪೂರಕ ವೆಂಬಂತೆ ಅರ್ಧಕೊಡದಷ್ಟೇ ನೀರು ದೇವಾಲಯದ ಗರ್ಭಗುಡಿಯಲ್ಲಿ ಲಭ್ಯವಾಗುತ್ತೆ‌. ಅದೇ ನೀರಿನಿಂದ ಮೂಲವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತೆ. ಈ ವಿಶೇಷತೆ ಯಿಂದ ಮತ್ತು ಇಲ್ಲಿಗೆ ಬರುವ ಭಕ್ತರ ಬೇಡಿಕೆ ಈಡೇರುವ ನಂಬಿಕೆ ಇದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿದೆ.

ವರದಿ: ನಮ್ಮೂರ ಟಿವಿ ವೆಂಕಟೇಶ್ ನಾಯಕ್