ಸರ್ಕಾರಿ ಆಸ್ಪತ್ರೆಗಳಿಗೆ ಮುಗಿಬಿದ್ದಿರುವ ಜನತೆ…

246

ಬಳ್ಳಾರಿ/ಹೊಸಪೇಟೆ:ರಾಜ್ಯಾದ್ಯಂತ ಖಾಸಗಿ ವೈದ್ಯರುಗಳು ಮುಷ್ಕರ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಜನತೆ ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಿಗೆ ಮುಗಿಬಿದ್ದಿದ್ದಾರೆ.ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯಿದೆ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ, ಖಾಸಗಿ ವೈದ್ಯರುಗಳು ಹಮ್ಮಿಕೊಂಡಿರುವ ಮುಷ್ಕರ ಎರಡನೇ ದಿನಕಕ್ಕೆ ಕಾಲಿಟ್ಟಿದ್ದು. ತಿದ್ದುಪಡಿ ವಿಧೇಯಕ ವಿರೋಧಿಸಿ, ಸ್ಥಳೀಯ ಖಾಸಗಿ ವೈದ್ಯರುಗಳು ಬೆಳಗಾವಿ ಚಲೋ ಹಮ್ಮಿಕೊಂಡಿರುವುದರಿಂದ ನಗರದಲ್ಲಿನ ಖಾಸಗಿ ಆಸ್ಪತ್ರೆಗಳು ಕಳೆದೆರಡು ದಿನಗಳಿಂದ ಬಂದ್ ಆಗಿವೆ. ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ತುರ್ತು ಚಿಕಿತ್ಸೆ ಸೇರಿದಂತೆ ಮತ್ತಿತರ ಖಾಯಿಲೆಗಳಿಗಾಗಿ ರೋಗಿಗಳು ಈಗ ನಗರದ ಉಪ ವಿಭಾಗ ಮಟ್ಟದ ಸರ್ಕಾರ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ.ಕಳೆದೆರಡು ದಿನಗಳಿಂದ ಉಪವಿಭಾಗದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳಿಂದ ತುಂಬಿ ಹೋಗಿವೆ. ಉಪವಿಭಾಗದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೀಟಿ ಪಡೆಯುವುದು, ಎಕ್ಸರೆ ತೆಗೆಯಿಸುವುದು. ರಕ್ತ ಪರೀಕ್ಷೆ ಸೇರಿದಂತೆ ಪ್ರತಿಯೊಂದಕ್ಕೂ ನೂರಾರು ಸಂಖ್ಯೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿರುವುದು ಕಂಡು ಬರುತ್ತಿದೆ.ಸ್ಥಳೀಯ ಉಪವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು. ಇರುವ ವೈದ್ಯರು ಮತ್ತು ಸಿಬ್ಬಂದಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸಹಾಯದಿಂದ ರೋಗಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳಿಂದ ತುಂಬಿ ಹೋಗಿದೆ. ಆಸ್ಪತ್ರೆಯಲ್ಲಿನ ಬೆಡ್ ಗಳೆಲ್ಲಾ ತುಂಬಿ ಹೋಗಿವೆ. ಆಸ್ಪತ್ರೆಯ ಆವರಣ ಸೇರಿದಂತೆ ಎಲ್ಲೆಲ್ಲೂ ರೋಗಿಗಳೇ ಕಂಡು ಬರುತ್ತಿದ್ದಾರೆ.ಹೊರಗೆ ಹೋಗಲಾಗದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾಯಲು ಆಗದೆ ರೋಗಿಗಳು ಪರದಾಡುತ್ತಿದ್ದಾರೆ.