ಬಾಹುಬಲಿ-2 ಬಿಡುಗಡೆಗೂ ಮುನ್ನ ದಾಖಲೆ 500 ಕೋಟಿ ಗಳಿಕೆ

463
2015ರಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ ಚಿತ್ರದ ಭಾರತದಲ್ಲಿ ಸಂಚಲನ ಮೂಡಿಸಿ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿತ್ತು.
ಇದೀಗ ಬಾಹುಬಲಿ-2 ಚಿತ್ರದ ಬಿಡುಗಡೆಗೆ ಸಿದ್ಧವಾಗಿದ್ದು ಬಿಡುಗಡೆಗೂ ಮುನ್ನ 500 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ತನ್ನ ಹಳೇಯ ದಾಖಲೆಯನ್ನು ಬಾಹುಬಲಿ-2 ಚಿತ್ರ ಅಳಿಸಿ ಹಾಕಿದೆ.
ಬಾಹುಬಲಿ ಚಿತ್ರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರಕಾಣುತ್ತಿದೆ. ಚಿತ್ರ ನಿರ್ದೇಶಕ ಕರಣ್ ಜೋಹಾರ್ ರ ಧರ್ಮಾ ಪ್ರೋಡೆಕ್ಷನ್ ಈ ಬಾರಿಯೂ ಬಾಹುಬಲಿ-2 ಹಿಂದಿ ಡಬ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು ಇದಕ್ಕಾಗಿ 120 ಕೋಟಿ ಬಿಡ್ ಮಾಡಿದೆ. ಇನ್ನು ಮೂಲಕ ತೆಲುಗು ಚಿತ್ರ 130 ಕೋಟಿಗೆ ಸೇಲ್ ಆಗಿದೆ. ತಮಿಳಿನ ಥಿಯೇಟರ್ ರೈಟ್ಸ್ 47 ಕೋಟಿಗೆ ಸೇಲು ಆಗಿದೆ. ಕೇರಳದಲ್ಲಿ 10 ಕೋಟಿ ಮತ್ತು ಕರ್ನಾಟಕದಲ್ಲಿ 45 ಕೋಟಿಗೆ ಸೇಲ್ ಆಗಿದೆ. ಇನ್ನು ಉತ್ತರ ಅಮೆರಿಕದಲ್ಲೂ ಸಹ 45 ಕೋಟಿಗೆ ಥಿಯೇಟರ್ ರೈಟ್ಸ್ ಸೇಲ್ ಆಗಿದೆ. ಇದೆಲ್ಲಾ ಸೇರಿ ಬಾಹುಬಲಿ-2 ಚಿತ್ರ ಬಿಡುಗಡೆಗೂ ಮುನ್ನ 500 ಕೋಟಿ ಬಿಸಿನೆಸ್ ಮಾಡಿದೆ. ಇನ್ನು ಹಿಂದಿ ಡಬ್ ಆವೃತ್ತಿಯ ಸ್ಯಾಟಲೈಟ್ ರೈಟ್ಸ್ 51 ಕೋಟಿಗೆ ಸೋನಿ ಟಿವಿ ನೆಟ್ ವರ್ಕ್ ಖರೀದಿಸಿದೆ. ಇನ್ನು ತೆಲುಗಿನ ಆವೃತ್ತಿ 26 ಕೋಟಿಗೆ ಸೇಲ್ ಆಗಿದೆ.
ಬಾಹುಬಲಿ-2 ಚಿತ್ರ 250 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನ 500 ಕೋಟಿ ಗಳಿಸಿದೆ. ಇನ್ನು ಬಾಹುಬಲಿ ಮೊದಲ ಆವೃತ್ತಿ ವಿಶ್ವದಾದ್ಯಂತ 600 ಕೋಟಿ ಗಳಿಕೆ ಮಾಡಿತ್ತು.
ಬಾಹುಬಲಿ-2 ಚಿತ್ರವನ್ನು ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶಿಸುತ್ತಿದ್ದು, ದೊಡ್ಡ ತಾರಾಗಣವನ್ನು ಹೊಂದಿದೆ. ಬಾಹುಬಲಿಯಾಗಿ ಪ್ರಭಾಸ್, ಬಲ್ಲಳಾದೇವನಾಗಿ ರಾಣಾ ದಗ್ಗುಬಾಟಿ, ದೇವಸೇನಾ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ, ಶಿವಗಾಮಿ ಪಾತ್ರದಲ್ಲಿ ರಮ್ಯಾಕೃಷ್ಣ, ತಮನ್ನಾ ಭಾಟಿಯಾ, ಕಟ್ಟಪ್ಪನಾಗಿ ಸತ್ಯರಾಜ್ ಅಭಿನಯಿಸಿದ್ದಾರೆ.